ದೊಡ್ಡಬಳ್ಳಾಪುರ: ಸೇವೆಯೇ ಪರಮೋಚ್ಛ ಧ್ಯೇಯವಾಗಿರುವ ಲಯನ್ಸ್ ಕ್ಲಬ್ ಅಂಧತ್ವ ನಿವಾರಣೆಯಲ್ಲಿ ಜಗತ್ತು ಮೆಚ್ಚುವ ಬದ್ದತೆ ಪ್ರದರ್ಶಿಸಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಬಿ.ವಿ.ಅಚ್ಯುತಾನಂದರೆಡ್ಡಿ ಹೇಳಿದರು.
ನಗರದ ಪ್ರತಿಷ್ಠಿತ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ವ್ಯಾಪ್ತಿಯಲ್ಲಿ ನೂತನವಾಗಿ ರಚಿಸಲಾದ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟೂಷನ್ಸ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ 210 ದೇಶಗಳಲ್ಲಿ ತನ್ನ ಸಾಮಾಜಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವ ಲಯನ್ಸ್ ಕ್ಲಬ್ ನಲ್ಲಿ ತೊಡಗಿಕೊಳ್ಳುವುದೇ ಮಹತ್ವದ ವಿಚಾರವಾಗಿದೆ. ಬುದ್ದಿಮತ್ತೆ, ಸಮಯ ಹಾಗೂ ಸಂಪನ್ಮೂಲಗಳ ಸದ್ಭಳಕೆಗೆ ಇದೊಂದು ವಿಶಿಷ್ಟ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಮಾಜಿಕ ಕಾಳಜಿ ಹಾಗೂ ಬದ್ದತೆಯನ್ನು ಉತ್ತೇಜಿಸುವ ಸಲುವಾಗಿ ಲಯನ್ಸ್ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ಸೇವಾ ಚಟುವಟಕೆಗಳಿಗೆ ಕೋಲಾರದ ಆರ್.ಎಲ್.ಜಾಲಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗ ನೀಡಲಾಗುವುದು ಎಂದರು.
ನೂತನ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್ ಮಾತನಾಡಿ, ಹೊಸ ಕ್ಲಬ್ ಮುಖ್ಯವಾಗಿ ಕ್ಯಾನ್ಸರ್, ಮಧುಮೇಹ ರೋಗಗಳ ಜಾಗೃತಿ, ಚಿಕಿತ್ಸೆ ಹಾಗೂ ನಿರ್ವಹಣಾ ಕ್ರಮಗಳು, ಪರಿಸರ ಕಾಳಜಿಯನ್ನು ಆದ್ಯತೆಯಾಗಿಟ್ಟುಕೊಂಡು ತನ್ನ ಕಾರ್ಯಯೋಜನೆಯನ್ನು ಜಾರಿಗೆ ತರಲಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಜಿ.ಗೋಪಾಲ್, ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ವತಿಯಿಂದ ನೂತನ ಸಂಸ್ಥೆ ಪ್ರಾಯೋಜನೆಗೊಳ್ಳುತ್ತಿದೆ ಎಂದು ತಿಳಿಸಿದರು.
ಎಂಜೆಎಫ್ ಬಿ.ಎಸ್.ರಾಜಶೇಖರಯ್ಯ, ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಂಜೆಎಫ್ ಬಿ.ಎಸ್.ನಾಗರಾಜ್ ಕಾರ್ಯಕಾರಿ ಸಮಿತಿ ಸದಸ್ಯರ ಕರ್ತವ್ಯಗಳ ಅರಿವು ಮೂಡಿಸಿದರು.
ಲಯನ್ಸ್ ಪಿಎಂಜೆಎಫ್ ಅಜಿತ್ಬಾಬು, ರೀಜನಲ್ ಛೇರ್ಪರ್ಸನ್ ಕೆ.ವಿ.ಪ್ರಭುಸ್ವಾಮಿ, ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಟ್ರಸ್ಟಿ ಜೆ.ರಾಜೇಂದ್ರ, ಎಂಜೆಎಫ್ ನಾಗರಾಜಶೆಟ್ಟಿ, ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ರೇಖಾ ವೆಂಕಟೇಶ್, ಲಯನ್ಸ್ ಚಾರಿಟೀಸ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮತ್ತಿತರರು ಪಾಲ್ಗೊಂಡಿದ್ದರು..
ನೂತನ ಪದಾಧಿಕಾರಿಗಳು: ಎಂ.ಆರ್.ಶ್ರೀನಿವಾಸ್(ಅಧ್ಯಕ್ಷ), ಎನ್.ಎಸ್.ಬಾಬುರೆಡ್ಡಿ(ಕಾರ್ಯದರ್ಶಿ), ಸುಮಿತ್ ಪಾಲ್(ಖಜಾಂಚಿ), ಕೆ.ವೀಣಾ(ಜಂಟಿ ಕಾಯದರ್ಶಿ), ಎಲ್.ಎನ್.ಪ್ರದೀಪ್ ಕುಮಾರ್, ಡಾ.ಎಂ.ಶ್ರೀನಿವಾಸರೆಡ್ಡಿ, ಜೆ.ಆರ್.ರಾಕೇಶ್(ಉಪಾಧ್ಯಕ್ಷರು), ಕೆ.ಆರ್.ರವಿಕಿರಣ್(ಆಡಳಿತಾಧಿಕಾರಿ), ಬಿ.ಶ್ರೀನಿವಾಸ(ಟೇಲ್ ಟ್ವಿಸ್ಟರ್), ಕೆ.ತಿರುಮಲೇಶ್(ಲಯನ್ ಟೇಮರ್), ಕೆ.ಆರ್.ಮಂಜುಳಾ(ಸಂವಹನ ಮುಖ್ಯಸ್ಥೆ), ಟಿ.ಮಹಂತೇಶಪ್ಪ(ಎಲ್ಸಿಐಎಫ್ ಸಂಯೋಜಕ), ಎನ್.ಬಿ.ಶಂಕರ್(ಸೇವಾ ವಿಭಾಗ ಮುಖ್ಯಸ್ಥ), ಕೆ.ಎಂ.ಮುನಿರಾಮೇಗೌಡ(ಸದಸ್ಯತ್ವ ಸಮಿತಿ ಮುಖ್ಯಸ್ಥ), ಎಸ್.ರವಿಕುಮಾರ್(ಕಾರ್ಯಕ್ರಮ ಸಮಿತಿ ಮುಖ್ಯಸ್ಥ), ನಿರ್ದೇಶಕರಾಗಿ ಲಕ್ಷ್ಮೀ ಶ್ರೀನಿವಾಸ್, ಕೆ.ವಿ.ಪ್ರಸನ್ನಕುಮಾರ್, ನಂಜೇಗೌಡ, ಎಸ್.ಎಸ್.ದೇವಿಕಾರಾಣಿ, ಎಲ್.ಎನ್.ನಾಗರಾಜ್, ಎಸ್.ಮುಖೇಶ್ ಕಾರ್ಯನಿರ್ವಹಿಸಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..