ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಸೋಮವಾರ 31 ವಾರ್ಡ್ ಗಳಿಂದ 122 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾದಾಗಿನಿಂದ ಒಟ್ಟು 151 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಹೆಚ್ಚಿನ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರಿಂದ ನಗರದ ತಾಲೂಕು ಪಂಚಾಯಿತಿ ರಸ್ತೆಯಲ್ಲಿ ಜನಜಂಗುಳಿ ಕಂಡು ಬಂದಿತು.
ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ಒಟ್ಟು ಐದು ಜನರಿಗೆ ಮಾತ್ರ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಒಳ ಬಿಡಲಾಗುತ್ತಿತ್ತು. ಆದರೆ ಹೊರಗಡೆ ನೂಕು ನುಗ್ಗಲು ಉಂಟಾಗಿತ್ತು.
ರಸ್ತೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಮ್ಮ ಬೆಂಬಲಿಗರೊಂದಿಗೆ ಗುಂಪು ಗುಂಪಾಗಿ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
31 ವಾರ್ಡ್‍ಗಳ ಒಟ್ಟು ನಾಮಪತ್ರಗಳು: ವಾರ್ಡ್ ನಂ. 1ರಲ್ಲಿ 6, ವಾರ್ಡ್ ನಂ. 2 ರಲ್ಲಿ 9, ವಾರ್ಡ್ ನಂ. 3ರಲ್ಲಿ 4, ವಾರ್ಡ್ ನಂ. 4ರಲ್ಲಿ 3, ವಾರ್ಡ್ ನಂ. 5ರಲ್ಲಿ 5, ವಾರ್ಡ್ ನಂ. 6ರಲ್ಲಿ 4, ವಾರ್ಡ್ ನಂ. 7ರಲ್ಲಿ 6, ವಾರ್ಡ್ ನಂ. 8ರಲ್ಲಿ 3. ವಾರ್ಡ್ ನಂ. 9ರಲ್ಲಿ 3, ವಾರ್ಡ್ ನಂ. 10ರಲ್ಲಿ 5 , ವಾರ್ಡ್ ನಂ. 11ರಲ್ಲಿ 5 , ವಾರ್ಡ್ ನಂ. 12ರಲ್ಲಿ 6, ವಾರ್ಡ್ ನಂ. 13ರಲ್ಲಿ 6, ವಾರ್ಡ್ ನಂ. 14ರಲ್ಲಿ 4 , ವಾರ್ಡ್ ನಂ. 15ರಲ್ಲಿ 3, ವಾರ್ಡ್ ನಂ. 16ರಲ್ಲಿ 4, ವಾರ್ಡ್ ನಂ. 17ರಲ್ಲಿ 3, ವಾರ್ಡ್ ನಂ. 18ರಲ್ಲಿ 8, ವಾರ್ಡ್ ನಂ. 19ರಲ್ಲಿ 3, ವಾರ್ಡ್ ನಂ. 20ರಲ್ಲಿ 6, ವಾರ್ಡ್ ನಂ. 21ರಲ್ಲಿ 5, ವಾರ್ಡ್ ನಂ. 22ರಲ್ಲಿ 7, ವಾರ್ಡ್ ನಂ. 23ರಲ್ಲಿ 5, ವಾರ್ಡ್ ನಂ. 24ರಲ್ಲಿ 4, ವಾರ್ಡ್ ನಂ. 25ರಲ್ಲಿ 5, ವಾರ್ಡ್ ನಂ. 26ರಲ್ಲಿ 4, ವಾರ್ಡ್ ನಂ. 27ರಲ್ಲಿ 3, ವಾರ್ಡ್ ನಂ. 28ರಲ್ಲಿ 3, ವಾರ್ಡ್ ನಂ. 29ರಲ್ಲಿ 5, ವಾರ್ಡ್ ನಂ. 30ರಲ್ಲಿ 7, ವಾರ್ಡ್ ನಂ. 31ರಲ್ಲಿ 7ನಾಮಪತ್ರಗಳು ಸಲ್ಲಿಕೆಯಾಗಿವೆ.
ಬಿಜೆಪಿ,ಕಾಂಗ್ರೆಸ್ ಪಕ್ಷದ ವತಿಯಿಂದ ನಗರಸಭೆಯ ಎಲ್ಲಾ 31 ವಾರ್ಡ್ ಗಳಿಗೂ ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್ 28 ವಾರ್ಡ್‍ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕನ್ನಡ ಪಕ್ಷದ ವತಿಯಿಂದ 5, ಸಿಪಿಐಎಂ ವತಿಯಿಂದ 2 ವಾರ್ಡ್‍ಗಳಿಗೆ ಮಾತ್ರ ನಾಮ ಪತ್ರಗಳು ಸಲ್ಲಿಕೆಯಾಗಿವೆ.
31 ವಾರ್ಡ್‍ಗಳಿಂದ ಇದುವರೆಗೆ ಸ್ವೀಕೃತವಾಗಿರುವ ಒಟ್ಟು 151 ನಾಮಪತ್ರಗಳಲ್ಲಿ ಕಾಂಗ್ರೆಸ್-38, ಬಿಜೆಪಿ -33, ಜೆಡಿಎಸ್-33, ಬಿಎಸ್‍ಪಿ-3 , ಸಿಪಿಐ(ಎಂ)-2, ಕನ್ನಡ ಪಕ್ಷ-5, ಕೆ.ಆರ್.ಎಸ್-2, ಪ್ರಜಾಕೀಯ ಪಕ್ಷ-1, ಎಸ್.ಡಿ.ಪಿ.ಐ-4,ಹಾಗೂ ಪಕ್ಷೇತರರು 30 ಮಂದಿ ಸಲ್ಲಿಸಿದ್ದಾರೆ.
ಆ.24 ನಾಮಪತ್ರಗಳ ಪರೀಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಆ.26 ಕಡೆಯ ದಿನವಾಗಿರುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..