ದೊಡ್ಡಬಳ್ಳಾಪುರ: ಮಂಗಳವಾರ ರಾತ್ರಿ ಸುರಿದ ಭರ್ಜರಿ ಮಳೆ ಹಲವು ಅವಾಂತರ ಸೃಷ್ಟಿಸಿರುವ ಬೆನ್ನಲ್ಲೆ, ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡುಗು ಜಲಾಶಯ ಕೋಡಿ ಬಿದ್ದಿದ್ದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.
45 ಅಡಿಯಷ್ಟು ಆಳ ನೀರು ನಿಲ್ಲುವ ಸಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಒಟ್ಟಾರೆ 4,390 ದಶಲಕ್ಷ ಲೀಟರ್ ನೀರು ಸಂಗ್ರಹಣೆಯಾಗಲಿದೆ. ಇದರಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ 1,390 ದಶಲಕ್ಷ ಲೀಟರ್, ಚಿಕ್ಕಬಳ್ಳಾಪುರ ನಗರಕ್ಕೆ 3,000 ದಶಲಕ್ಷ ಲೀಟರ್ ನೀರಿನ ಹಂಚಿಕೆಯಾಗಿದೆ.
ದಾಖಲೆ ಮಳೆ: ಮಂಗಳವಾರ ತಾಲೂಕಿನಲ್ಲಿ 36.09 ಮಿಮೀ ಮಳೆ ಸುರಿದಿದ್ದು, ಹೆಗ್ಗಡಿಹಳ್ಳಿ ಹಾಗೂ ಮೆಳೇಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲೆಯ 129.5 ಮಿಲಿಮೀಟರ್ ಮಳೆಯಾಗಿದೆ.
ಉಳಿದಂತೆ ತಾಲೂಕಿನ ಕಸಬ ಹೋಬಳಿಯಲ್ಲಿ 21.04 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 11.03 ಮಿಮೀ, ಮಧುರೆ ಹೋಬಳಿಯಲ್ಲಿ 8.01 ಮಿಮೀ, ಸಾಸಲು ಹೋಬಳಿಯಲ್ಲಿ 49.08 ಮಿಮೀ, ತೂಬಗೆರೆ ಹೋಬಳಿಯಲ್ಲಿ 72.07 ಮಿಮೀ ಮಳೆಯಾಗಿದ್ದು, ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 63 ಮಿಮೀ, ಆರೂಢಿ ಮತ್ತು ತೂಬಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 62 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….