ದೊಡ್ಡಬಳ್ಳಾಪುರ: ಸೆಪ್ಟೆಂಬರ್ 3 ರಂದು ನಡೆದಿದ್ದ ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡ್ ಗಳ ಚುನಾವಣೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದ ಮತಯಂತ್ರಗಳ ಕೊಠಡಿಯನ್ನು ತೆರೆದು ಮತ ಎಣಿಕೆ ಮಾಡಲಾಯಿತು.
ಫಲಿತಾಂಶ: ಬಿಜೆಪಿ – 12, ಕಾಂಗ್ರೆಸ್ – 09, ಜೆಡಿಎಸ್ – 07 ಹಾಗೂ ಪಕ್ಷೇತರರು 3 ಸ್ಥಾನ ಪಡೆದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ವಿಜಯೋತ್ಸವಕ್ಕೆ ನಿಷೇಧಿಸಿದ್ದರು, ಚುನಾಯಿತರು ಹಾಗೂ ಬೆಂಬಲಿಗರ ಸಂಭ್ರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.
ವಾರ್ಡ್ ವಾರು ಚುನಾಯಿತರ ವಿವರ:
- 1.ಆಶ್ರಯ ಬಡಾವಣೆ – ಹಂಸಪ್ರಿಯ.ಆರ್. (ಬಿಜೆಪಿ),
- 2. ಬಸವೇಶ್ವರ ನಗರ – ಎನ್.ಪದ್ಮನಾಭ (ಬಿಜೆಪಿ),
- 3.ಮುತ್ಸಂದ್ರ – ಸುಮಿತ್ರಾ ಆನಂದ್ (ಬಿಜೆಪಿ),
- 4.ವಿನಾಯಕನಗರ ನಾಗರತ್ನಮ್ಮ (ಬಜೆಪಿ),
- 5.ಸಿದ್ದೇನಾಯಕನಹಳ್ಳಿ – ಇಂದ್ರಾಣಿ.ವಿ (ಪಕ್ಷೇತರ),
- 6.ಮುತ್ತೂರು – ಮುನಿರಾಜು. ಎಂ (ಪಕ್ಷೇತರ),
- 7.ಶ್ರೀನಗರ – ಎಂ.ಮಲ್ಲೇಶ್ (ಜೆಡಿಎಸ್),
- 8.ಖಾಸ್ ಬಾಗ್ ( ದರ್ಗಾಪುರ) – ವಿ.ನಾಗರಾಜ್ (ಕಾಂಗ್ರೆಸ್),
- 9. ಸಂಜಯನಗರ – ಸುಧಾ ಲಕ್ಷ್ಮೀನಾರಾಯಣ (ಬಿಜೆಪಿ),
- 10.ವಿದ್ಯಾನಗರ – ಎಸ್.ನಾಗವೇಣಿ (ಕಾಂಗ್ರೆಸ್),
- 11.ಕರೇನಹಳ್ಳಿ 1 – ಚಂದ್ರಮೋಹನ್.ಎಚ್ (ಕಾಂಗ್ರೆಸ್),
- 12.ಕನಕದಾಸನಗರ – ಶಿವರಾಜ್ (ಬಿಜೆಪಿ),
- 13.ಭುವನೇಶ್ವರಿ ನಗರ – ವೆಂಕಟೇಶ್ (ಬಿಜೆಪಿ),
- 14.ನೇಯ್ಗೆಬೀದಿ – ಎಂ.ಜಿ.ಶ್ರೀನಿವಾಸ್ (ಕಾಂಗ್ರೆಸ್),
- 15. ತೂಬಗೆರೆ ಪೇಟೆ – ಆರ್.ಲಕ್ಷ್ಮೀಪತಿ ಬಿಜೆಪಿ,
- 16.ಗಾಂಧಿನಗರ – ಟಿ.ಎನ್.ಪ್ರಭುದೇವ (ಜೆಡಿಎಸ್),
- 17.ಕುಚ್ಚಪ್ಪನ ಪೇಟೆ – ವತ್ಸಲ.ಎಸ್ (ಬಿಜೆಪಿ),
- 18. ವೀರಭದ್ರನಪಾಳ್ಯ (ಕಲ್ಲುಪೇಟೆ) – ಆರ್.ಶಿವಣ್ಣ (ಬಿಜೆಪಿ),
- 19.ದೇವರಾಜ ನಗರ – ಎಚ್.ಎಸ್.ಶಿವಶಂಕರ್ (ಬಿಜೆಪಿ),
- 20.ತ್ಯಾಗರಾಜನಗರ – ಸುರೇಶ್ (ಪಕ್ಷೇತರ),
- 21.ಹೇಮಾವತಿಪೇಟೆ – ಎಸ್.ಎ .ಬಾಸ್ಕರ್ (ಬಿಜೆಪಿ),
- 22.ಚಿಕ್ಕಪೇಟೆ – ಅಲ್ತಾಪ್ ಅಬ್ದುಲ್ ಹಮೀದ್ (ಕಾಂಗ್ರೆಸ್),
- 23. ಗಾಣಿಗರಪೇಟೆ – ಕೆ.ಮಂಜುಳ,
- 24.ಎಲೇಪೇಟೆ – ಆನಂದ್ (ಕಾಂಗ್ರೆಸ್),
- 25.ಮಾರುತಿನಗರ – ಆದಿಲಕ್ಷ್ಮೀ (ಜೆಡಿಎಸ್),
- 26.ರೋಜಿಪುರ (ಗಂಗಾಧರಪುರ) – ಎಂ.ರಂಜನಿ (ಕಾಂಗ್ರೆಸ್),
- 27.ಸೋಮೇಶ್ವರ ಬಡಾವಣೆ – ರವಿಕುಮಾರ್.ವಿ.ಎಸ್ (ಜೆಡಿಎಸ್),
- 28.ಕಛೇರಿ ಪಾಳ್ಯ – ರೂಪಿಣಿ (ಕಾಂಗ್ರೆಸ್),
- 29.ಶಾಂತಿನಗರ – ಫರ್ಹಾನಾ ತಾಜ್ (ಜೆಡಿಎಸ್),
- 30.ಇಸ್ಲಾಂಪುರ – ಹಸೀನಾ ತಾಜ್ (ಜೆಡಿಎಸ್),
- 31.ಕರೇನಹಳ್ಳಿ 2 – ಆರ್.ಪ್ರಭಾ (ಜೆಡಿಎಸ್).
ಸೋತ ಪ್ರಮುಖರು: ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನಾಥ್, ನಗರಸಭೆ ಮಾಜಿ ಅದ್ಯಕ್ಷ ಮುದ್ದಪ್ಪ, ಸದಸ್ಯರಾದ ಕೆಂಪರಾಜ್, ಶಿವಕುಮಾರ್, ಸುಶೀಲರಾಘವ, ಬಿಜೆಪಿ ಜಿಲ್ಲಾವಕ್ತಾರರಾದ ಪುಷ್ಪಾಶಿವಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ಕಾಂಗ್ರೆಸ್ ಹಿರಿಯ ಮುಖಂಡ ಸೋಮರುದ್ರ ಶರ್ಮ, ಕನ್ನಡ ಪಕ್ಷದ ಡಿ.ಪಿ.ಆಂಜನೇಯ ಸೋಲನಪ್ಪಿದ್ದಾರೆ.
ಹ್ಯಾಟ್ರಿಕ್ ಬಾರಿಸಿದ ರವಿಕುಮಾರ್: ಸೋಮೇಶ್ವರ ಬಡಾವಣೆಯಲ್ಲಿ ಜೆಡಿಎಸ್ ನಗರದ ಘಟಕದ ಅಧ್ಯಕ್ಷ ರವಿಕುಮಾರ್.ವಿ.ಎಸ್ ಸತತ ಮೂರು ಚುನಾವಣೆಯಲ್ಲಿ ಚುನಾಯಿತಾರಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ.06, ಜೆಡಿಎಸ್ 14, ಕಾಂಗ್ರೆಸ್ 05, ಕನ್ನಡ ಪಕ್ಷ 02 ಹಾಗೂ 05ಮಂದಿ ಪಕ್ಷೇತರರು ಚುನಾಯಿತರಾಗಿದ್ದರು. ಇದರ ಅನ್ವಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮತಗಳಿಕೆ ಹೆಚ್ಚಾಗಿದ್ದರೆ, ಜೆಡಿಎಸ್ ಕುಸಿದಿದ್ದರೂ ಮೈತ್ರಿಗೆ ಅನಿವಾರ್ಯವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..