ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 06 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 11 ಕರೊನಾ ಪ್ರಕರಣಗಳು ವರದಿಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ ತಾಲೂಕಿನ ಓರ್ವ ಪುರುಷ, 03 ಮಹಿಳೆಯರು ಸೇರಿ 04. ಹೊಸಕೋಟೆ 03 ಮಹಿಳೆಯರು. ದೇವನಹಳ್ಳಿ ತಾಲೂಕಿನ ಓರ್ವ ಪುರುಷ, ಓರ್ವ ಮಹಿಳೆ ಸೇರಿ 02. ದೊಡ್ಡಬಳ್ಳಾಪುರ ತಾಲೂಕಿನ 02 ಪುರುಷರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ನೆಲಮಂಗಲ ತಾಲೂಕಿನ 80 ವರ್ಷದ ವೃದ್ಧ ಸಾವನಪ್ಪಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 72 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.
ಉಳಿದಂತೆ 2098 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 2278 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..