ದೊಡ್ಡಬಳ್ಳಾಪುರ: ವಿದ್ಯಾರ್ಥಿ ದಿಸೆಯಿಂದಲೇ ದೇಶಪ್ರೇಮ, ಶಿಸ್ತು, ಕಾನೂನು ಸುವ್ಯವಸ್ಥೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಲೇಜು (ಪ್ರೌಢ ಶಾಲೆ ವಿಭಾಗದ)ದ ಪ್ರಭಾರಿ ಉಪಪ್ರಾಂಶುಪಾಲರಾದ ಕೆ.ವಿ.ವೆಂಕಟ ರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ)ದ ಆವರಣದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಬೇಕು. ಸದೃಢ ಭಾರತವನ್ನಾಗಿಸುವ ದೃಷ್ಟಿಯಿಂದ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕನಸಿನ ಕೂಸು ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ್ನು ಅನುಷ್ಠಾನ ಮಾಡಲಾಗಿದೆ ಎಂದರು.
ಎಸ್.ಪಿ.ಸಿ ಅಧಿಕಾರಿ ಡಾ.ಬಿ.ಕೆ.ಅಶ್ವಿನಿ ಮಾತನಾಡಿ, 2010ರಲ್ಲಿ ಕೇರಳ ಸರ್ಕಾರ ಅಲ್ಲಿನ ಶಾಲೆಗಳಲ್ಲಿ ಈ ಯೋಜನೆ ಆರಂಭಿಸಿತು. ಅದರಂತೆ ಮಕ್ಕಳಲ್ಲಿ ನವ ನಾಗರಿಕ ಸಮಾಜದ ಸುಧಾರಣೆಗಾಗಿ ನಾಗರಿಕ ಜ್ಞಾನ, ಸಂವಿಧಾನ, ಕಾನೂನು ಅರಿವು ಮೂಡಿಸಿ ನಾಯಕತ್ವ, ಧೈರ್ಯ, ಆತ್ಮ ವಿಶ್ವಾಸ, ಸ್ವಯಂ ಶಿಸ್ತು, ಸಹಾನುಭೂತಿಯಂತಹ ನೈತಿಕ ಮೌಲ್ಯಗಳನ್ನು ಬೆಳಸಿ ಸಾಮಾಜಿಕ ಸುಧಾರಣೆ ಮಾಡುವುದು ಈ ಯೋಜನೆಯ ಧ್ಯೇಯವಾಗಿದೆ ಎಂದು ಹೇಳಿದರು.
ಈ ವೇಳೆ 8ನೇ ತರಗತಿಯ 22 ಹೆಣ್ಣುಮಕ್ಕಳು ಸ್ಟೂಡೆಂಟ್ ಪೋಲಿಸ್ ಕೆಡೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಮ ಗಿಡಕ್ಕೆ ನೀರು ಎರೆಯುವ ಮೂಲಕ ಕೆಡೆಟ್ ಉದ್ಘಾಟಿಸಲಾಯಿತು.
9ನೇ ಬಾಟಲಿಯನ್ ಕೆ.ಎಸ್.ಪಿ ರಘುಪತಿ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ನಂದಕುಮಾರ್, ಶಿಕ್ಷಕರಾದ ಡಾ.ಮುನಿರಾಜು, ಇಂದಿರಾ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……