ಬೆಂ.ಗ್ರಾ.ಜಿಲ್ಲೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ 2021-22ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದೇವನಾಯಕನಹಳ್ಳಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಶಾಲೆಗೆ ಆಂಗ್ಲ ಮಾಧ್ಯಮದಲ್ಲಿ 6 ರಿಂದ 9ನೇ ತರಗತಿ ಬೋಧಿಸಲು ವಿವಿಧ ವಿಷಯಗಳ ಶಿಕ್ಷಕರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ, ಸ್ಥಳೀಯ ಅರ್ಹ ಅತಿಥಿ, ನಿವೃತ್ತಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಂಗ್ಲ ಭಾಷಾ ಶಿಕ್ಷಕರ 01 ಹುದ್ದೆಗೆ ಇಂಗ್ಲೀಷ್ ಮೇಜರ್, ಬಿ.ಎ/ ಬಿ.ಎಸ್ಸಿ/ ಬಿ.ಎಡ್. ವಿದ್ಯಾರ್ಹತೆ, ಹಿಂದಿ ಭಾಷಾ ಶಿಕ್ಷಕರ 01 ಹುದ್ದೆಗೆ ಪದವಿ ಜೊತೆ ಹಿಂದಿ-ಬಿ.ಎಡ್. ವಿದ್ಯಾರ್ಹತೆ, ಉರ್ದು ಶಿಕ್ಷಕರ 01 ಹುದ್ದೆಗೆ ಪದವಿ ಜೊತೆಗೆ ಉರ್ದು-ಬಿ.ಎಡ್. ವಿದ್ಯಾರ್ಹತೆ, ದೈಹಿಕ ಶಿಕ್ಷಕರ 01 ಹುದ್ದಗೆ ಬಿ.ಪಿ.ಇ.ಡಿ ವಿದ್ಯಾರ್ಹತೆ ಹಾಗೂ ಮಹಿಳಾ ಶುಶ್ರೂಷಕಿ 01 ಹುದ್ದಗೆ ಜಿ.ಎನ್.ಎಂ/ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವವರು ತಮ್ಮ ಸ್ವವಿವರಗಳಿರುವ (biodata, resume) ಮನವಿಗಳನ್ನು ಅವಶ್ಯ ದಾಖಲೆಗಳೊಂದಿಗೆ 2021ರ ಅಕ್ಟೋಬರ್ 12 ರೊಳಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲ್ಲೂಕಿನ ದೇವನಾಯಕನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು, ಮೊ. ಸಂ.: 9972727173 ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ: 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ದೂ.ಸಂ.: 080-29787455 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……