ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 12 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಹೊಸದಾಗಿ 10 ಕರೊನಾ ಪ್ರಕರಣಗಳು ವರದಿಯಾಗಿದ್ದು, ದೇವನಹಳ್ಳಿ ತಾಲೂಕಿನ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ ತಾಲೂಕಿನ 03 ಪುರುಷರು, 02 ಮಹಿಳೆಯರು ಸೇರಿ 05, ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನಲ್ಲಿ ತಲಾ ಒಬ್ಬ ಮಹಿಳೆಯರು ಸೇರಿ 02. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 03 ಪುರುಷರು ಸೇರಿ ಜಿಲ್ಲೆಯಲ್ಲಿ ಒಟ್ಟು 10 ಮಂದಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ದೇವನಹಳ್ಳಿ ತಾಲೂಕಿನ 71 ವರ್ಷದ ಸೋಂಕಿತ ಮಹಿಳೆ ಸಾವನಪ್ಪಿದ್ದಾರೆ ಎಂದು ಬುಲೆಟಿನ್ ವರದಿ ತಿಳಿಸಿದೆ.
ಪ್ರಸ್ತುತ ಜಿಲ್ಲೆಯಲ್ಲಿ 124 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 169ಕ್ಕೆ ಇಳಿಕೆಯಾಗಿದೆ.
ಉಳಿದಂತೆ ಜಿಲ್ಲೆಯ 2126 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದ್ದು,
ಇಂದಿನ ವರದಿಯ ಪ್ರಕಾರ 1876 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……