ದೊಡ್ಡಬಳ್ಳಾಪುರ: ಚಲಿಸುತ್ತಿದ್ದ ರೈಲಿಗೆ ವೃದ್ಧರೊಬ್ಬರು ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ರೈಲ್ವೇ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಕಳಿ ದುರ್ಗ ಮತ್ತು ತೊಂಡೇಬಾವಿ ರೈಲು ನಿಲ್ದಾಣಗಳ ನಡುವೆ ಈ ದುರ್ಘಟನೆ ನಡೆದಿದ್ದು, ಸುಮಾರು 70 ವರ್ಷದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮೃತರು ಸುಮಾರು 5.6 ಅಡಿ ಎತ್ತರ, ಕೋಲು ಮುಖ, ಬೋಳು ತಲೆ, ಕಪ್ಪು ಮೈ ಬಣ್ಣ ಹೊಂದಿದ್ದಾರೆ.
ಮೃತಪಟ್ಟಾಗ ಹಳದಿ ಮತ್ತು ಬಿಳಿ ಬಣ್ಣದ ಚೌಕಲಿ ಮನೆಗಳಿರುವ ಶರ್ಟ್, ಕಪ್ಪು ಬಣ್ಣದ ಲಾಡಿ ನಿಕ್ಕರ್ ಧರಿಸಿರುತ್ತಾರೆ.
ವಾರಸುದಾರರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರು ಮೊಬೈಲ್ ಸಂಖ್ಯೆ – 9480802143, 9845014463 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..