ಯಲಹಂಕ: ಸರ್ಕಾರಿ ಶಾಲೆ ಮತ್ತು ಕಾಲೇಜು ಎಂದರೆ ಮೂಗು ಮುರಿಯುವವರು. ಆದರೆ ಇಲ್ಲಿ ಖಾಸಗಿ ಶಾಲೆಯನ್ನು ಬಿಟ್ಟು ಇಲ್ಲಿನ ಸರ್ಕಾರಿ ಶಾಲೆ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳು ದಾಖಲೆ ಮಟ್ಟದಲ್ಲಿ ಸೇರುತ್ತಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಇಲ್ಲಿಗೆ ಸಮೀಪದ ರಾಜಾನುಕುಂಟೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜಮೀನು ಹಸ್ತಾಂತರ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಾದ ನೀಟ್, ಜೆಇಇ, ಕೆ.ಸಿಇಟಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಯಾವ ರೀತಿ ಇರಬೇಕು, ಎಸ್.ಡಿಎಂಸಿ ಹೇಗೆ ಸಹಕಾರ ನೀಡಬೇಕೆಂಬುದನ್ನು ರಾಜಾನುಕುಂಟೆ ಸರ್ಕಾರಿ ಕಾಲೇಜಿನಲ್ಲಿ ತೋರಿಸಿಕೊಟ್ಟಿದೆ. ಇಲ್ಲಿನ ಕಾಲೇಜು ಅಭಿವೃದ್ದಿ ಸಮಿತಿ, ಸಂಘಸಂಸ್ಥೆಗಳು, ದಾನಿಗಳು ಸೇರಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲು ಸರ್ಕಾರಿ ಶಾಲೆ ಮತ್ತು ಕಾಲೇಜಿಗೆ ಶಿಕ್ಷಣದ ಮೂಲ ಸೌಕರ್ಯ, ಕಲಿಯುವ ಕ್ರಮಗಳ ಸುಧಾರಣೆಗಾಗಿ ತೆಗೆದುಕೊಂಡಿರುವ ಕ್ರಮಗಳಿಂದ ಕಾಲೇಜು ಆರಂಭವಾದ ವರ್ಷದಲ್ಲೇ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲೆ ಸೇರ್ಪಡೆಯಾಗಿದ್ದಾರೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕ ಜಿ.ಕೆ.ಶ್ರೀರಾಮ್ ಮಾತನಾಡಿ, ನೂತನ ಕಾಲೇಜಿಗೆ ಸ್ಥಳೀಯ ಆಡಳಿತ ಸಮಿತಿಯ ಸೇವಾ ಸಂಸ್ಥೆಗಳ ಸಹಕಾರದಿಂದ 45 ಕಂಪ್ಯೂಟರ್, ಎಲ್ಲಾ ಮಕ್ಕಳಿಗೂ ಉಚಿತ ನೊಂದಣಿ, ಸಮವಸ್ತ್ರ, ಬ್ಯಾಗ್, ಪುಸ್ತಕ ನೋಟ್‍ಬುಕ್ ಅಗತ್ಯ ಕಟ್ಟಡ ನಿರ್ಮಾಣ, ಜೆಇಇ ನೀಟ್ ಪರೀಕ್ಷೆಗಳಿಗೆ ತರಬೇತಿ ಮತ್ತು ಅಗತ್ಯ ಶಿಕ್ಷಕರನ್ನು ನೇಮಿಸಿ ಅವರಿಗೆ ಸಂಬಳ ನೀಡಿದ್ದಾರೆ. ಅಲ್ಲದೆ ಐದಾರು ತಿಂಗಳಲ್ಲೇ ಸರ್ಕಾರದಿಂದ 3 ಎಕರೆ 15 ಗುಂಟೆ ಜಮೀನನ್ನು ಹಸ್ತಾಂತರ ಮಾಡಿ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಯನ್ನು ಮೀರಿಸಿ ದಾಖಲೆ ಮತ್ತು ಶಿಕ್ಷಣ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾಲೇಜಿನ ಅಭಿವೃದ್ದಿ ಮಂಡಳಿಯ ಕಾರ್ಯವನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಾಣಿ ಪೌಂಡೇಷನ್ ಮುಖ್ಯಸ್ಥರಾದ ವಾಣಿಶ್ರೀವಿಶ್ವನಾಥ್, ತಹಶೀಲ್ದಾರ್ ನರಸಿಂಹಮೂರ್ತಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎನ್.ಕಮಲಾಕರ್, ದೊಡ್ಡಬಳ್ಳಾಪುರ ವೃತ್ತನಿರೀಕ್ಷಕ ಎಂ.ಬಿ.ನವೀನ್ ಕುಮಾರ್, ಹೆಸರಘಟ್ಟ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋವಿಂದರಾಜು.ಸಿ.ವಿ, ಪ್ರಾಂಶುಪಾಲರಾದ ಪಾಲಾಕ್ಷ.ಟಿ. ಗ್ರಾಮಪಂಚಾಯಿತಿ ಅಧ್ಯಕ್ಷ ವೀರಣ್ಣ, ಕಾಲೇಜು ಅಭಿವೃದ್ದಿ ಸಮಿತಿಯ ರಾಜೇಂದ್ರಕುಮಾರ್, ನಿವೃತ್ತ ಪ್ರಾಂಶುಪಾಲರಾದ ಮರಿಬಸಪ್ಪ, ಇಟಕಲ್‍ಪುರದ ಮೋಹನ್‍ಕುಮಾರ್, ಎಂ.ತಿಮ್ಮಾರೆಡ್ಡಿ ,ಶಿವಣ್ಣ, ಸೋಮಶೇಖರ್, ಹಾಜರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……