ಮೈಸೂರು: ಕರ್ತವ್ಯಕ್ಕೆ ಅಡ್ಡಿಪಸಿದ ಕಾರಣ ಚಾಮುಂಡಿ ಬೆಟ್ಟದ ಪಿ.ಡಿ.ಓ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ, ಅಕೆಯ ಪತಿ ಸೇರಿ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಚಾಮುಂಡಿ ಬೆಟ್ಟದ ಪಿ.ಡಿ.ಓ ಪೂರ್ಣಿಮಾ, ತಾವರೆಕಟ್ಟೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ರಾಮರಾಜು ಎಂಬುವವರು ಅನಧಿಕೃತವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಗಳ ಜತೆ ಭೇಟಿ ನೀಡಿದ್ಧ ವೇಳೆ ತಾವರೆಕಟ್ಟೆ ಗ್ರಾಮದ ಉಪಾಧ್ಯಕ್ಷೆ ತುಳಸಿ ಹಾಗೂ ಅವರ ಪತಿ ಪುಟ್ಟರಾಜು, ನಿವೇಶನ ಮಾಲೀಕರಾದ ರಾಮರಾಜ ಅವರ ಮಗ ನಂದೀಶ್ ಹಾಗೂ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆ ಹೊತ್ತಿರುವ ಒಬ್ಬರು ಸ್ಥಳದಲ್ಲಿದ್ದು ಇವರಿಗೆ ನೊಟೀಸ್ ನೀಡಿದರೂ ಅದನ್ನ ತೆಗೆದುಕೊಳ್ಳದೆ ಇದು ಸರ್ವೆ ನಂಗೆ ಸೇರಿರುವ ಜಾಗವಾಗಿದೆ. ನಿಮಗೆ ತಾವರೆಕಟ್ಟೆಗೆ ಬರುವ ಹಾಗೂ ಕೆಲಸ ನಿಲ್ಲಿಸುವ ಅಧಿಕಾರ ಇಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಬೇಕಂತಲೇ ತೊಂದರೆ ಕೊಡುತ್ತೀರಿ ನಾವು ಏನೇ ಆದರೂ ಕೆಲಸ ನಿಲ್ಲಿಸುವುದಿಲ್ಲ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಈ ವೇಳೆ ಗ್ರಾ.ಪಂ ಉಪಾಧ್ಯಕ್ಷರ ಪತಿ ಪುಟ್ಟರಾಜು ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಅವರ ಪತಿ ಎಂದು ಹೇಳಿ ತೊಂದರೆ ನೀಡುತ್ತಿದ್ದು ಹೆಂಡತಿಯ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಾವರೆಕಟ್ಟೆಗೆ ಸೇರಿದ ಅನೇಕ ವಿಷಯಗಳಲ್ಲಿ ಅನವಶ್ಯಕ ವಿಷಯಗಳಲ್ಲಿ ಮೂಗು ತೋರಿಸಿ ನನ್ನ ಮೇಲೆ ಮೇಲಾಧಿಕಾರಿಗಳಿಗೆ ದೂರು ಬರೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ರಾಮರಾಜು, ಪುಟ್ಟರಾಜು, ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಹಾಗೂ ನಂದೀಶ್ ಇವರುಗಳ ವಿರುದ್ಧ ಕಾನೂನು ರೀತಿ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಜೀವ ಬೆದರಿಕೆ ಹಾಕಿರುವ ಸಂಬಂಧ ದೂರು ದಾಖಲಿಸಬೇಕು ಎಂದು ಮನವಿ ಮಾಡಿದ್ದರು. ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….