ದೊಡ್ಡಬಳ್ಳಾಪುರ: ಕಳೆದ ತಿಂಗಳು ಸುರಿದ ಮಳೆಗೆ ತಾಲೂಕಿನ ದುರ್ಗೆನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿದ್ದು, ಅದರ ಅಂಗವಾಗಿ ಇಂದು ದುರ್ಗೆನಹಳ್ಳಿ, ನೆಲ್ಲುಗುದಿಗೆ ಗ್ರಾಮಸ್ಥರು ದೀಪದ ಆರತಿ ಮಾಡಿ ಗಂಗಮ್ಮ ದೇವಿಗೆ ಹರಕೆ ತೀರಿಸಿದರು.
1993ರಲ್ಲಿ ಮಾಜಿ ಕೇಂದ್ರ ಸಚಿವ ರಾದ ಆರ್ ಎಲ್ ಜಾಲಪ್ಪನವರು ಕೆರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ್ದ ಕೆರೆಯಲ್ಲಿ ನಿರ್ಮಾಣವಾಗಿನಿಂದ ಇದುವರೆಗೂ ಒಮ್ಮೆಯು ನೀರು ಖಾಲಿಯಾಗದೆ ಇರುವುದು ವಿಶೇಷ.
ತೂಬಗೆರೆ ಹೋಬಳಿಯ ಸುತ್ತಮುತ್ತಲ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆರೆ ಇದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….