ದೊಡ್ಡಬಳ್ಳಾಪುರ: ವಿಜಯದಶಮಿ ದಿನವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನದ ಆಚರಣೆಯ ಅಂಗವಾಗಿ ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 300ಕ್ಕು ಹೆಚ್ಚು ಗಣವೇಷಧಾರಿಗಳು ಶಿಸ್ತುಬದ್ದವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಆರ್ ಎಸ್‍ಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಭಗವಾಧ್ವಜದೊಂದಿಗೆ ನಡೆದ ಮೆರವಣಿಗೆ ವೇಳೆ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಅನೇಕ ಸಂಘಟನೆಗಳ ನೇತೃತ್ವದಲ್ಲಿ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.
ಶ್ರೀ ಅಯ್ಯಸ್ವಾಮಿ ದೇವಾಲಯದಿಂದ ಆರಂಭವಾದ ಪಥಸಂಚಲನ ಚಿಕ್ಕಪೇಟೆ, ಬಸ್ ನಿಲ್ದಾಣ, ಸ್ವಾಮಿ ವಿವೇಕಾನಂದ ಮೂರ್ತಿ, ಲಕ್ಷ್ಮೀ ಚಿತ್ರ ಮಂದಿರ, ಡಾ. ರಾಜ್ ಕುಮಾರ್ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಅಂತ್ಯ ಗೋಳಿಸಲಾಯಿತು.
ಪಥ ಸಂಚಲನದಲ್ಲಿ 300ಕ್ಕು ಹೆಚ್ಚು ಗಣ ವೇಷಧಾರಿಗಳು ಲಾಠಿಗಳನ್ನು ಹಿಡಿದು ಶಿಸ್ತುಬದ್ದ ನಡಿಗೆ ಪ್ರದರ್ಶಿಸಿದರು. ಬ್ಯಾಂಡ್ ವೃಂದ ಸೇರಿದಂತೆ ಹಿರಿಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ಮುನ್ನಚ್ಚರಿಕೆ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನಂತರ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಾಂತ ಪ್ರಚಾರಕ್ ಪ್ರಮುಖ್ ವೆಂಕಟೇಶ್ ಬೈಠಕ್ ನಡೆಸಿದರು.
ಗಣವೇಷಧಾರಿಗಳಾದ ಮಕ್ಕಳು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಪಥ ಸಂಚಲನದ ಹಲವು ಪುಟಾಣಿ ಮಕ್ಕಳು ಗಣವೇಶ ತೊಟ್ಟು ಸಂಭ್ರಮಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……