ದೊಡ್ಡಬಳ್ಳಾಪುರ: ಜಿ.ಕೆ.ವಿ.ಕೆ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಭಾಗವಾದ ಗ್ರಾಮೀಣ ಸಹಭಾಗಿತ್ವ ಅಧ್ಯಯನವನ್ನು ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ನಡೆಸಿದರು.
ಕಳೆದ ಎರಡು ತಿಂಗಳಿನಿಂದ ಗ್ರಾಮ ವಾಸ್ತವ್ಯ ಹೂಡಿರುವ ವಿದ್ಯಾರ್ಥಿಗಳು ಹವಾಮಾನ ಚಕ್ರ, ವಿವಿಧ ಉದ್ದಿಮೆಗಳ ಶೇಕಡಾವಾರು ಮಾಹಿತಿಗಳು, ಸಮಸ್ಯೆ ಮತ್ತು ಪರಿಹಾರ ಮರ, ವಿವಿಧ ಕಾಲದ ಬೆಳೆ ಪಿರಮಿಡ್, ಊರಿನ ಹಿನ್ನಲೆ ಮತ್ತು ಇತರ ಮಾಹಿತಿಗಳು, ಸಾಮಾಜಿಕ ನಕ್ಷೆ , ಚಲನಾ ನಕ್ಷೆ, ಸಂಪರ್ಕ ನಕ್ಷೆ, ವಿವಿಧ ಕೃಷಿ ಉಪಕರಣಗಳ ಲಭ್ಯತೆಯ ಮಾಹಿತಿ, ಹೈನುಗಾರಿಕೆ ಇಳುವರಿಯ ಮಾಹಿತಿ ಮುಂತಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ವಿದ್ಯಾರ್ಥಿಗಳ ಅಧ್ಯಯನಕ್ಕೆ ವಿಸ್ತರಣಾ ಪ್ರಾಧ್ಯಾಪಕ ಡಾ.ಅಶೋಕ ದೊಡ್ಡಮನಿ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯ ಜಯಣ್ಣ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……