ಚಿಕ್ಕಬಳ್ಳಾಪುರ: ಮಕ್ಕಳಿಗೂ ಕೂಡ ತುರ್ತು ಕೋವಿಡ್ ಲಸಿಕೆ ಹಾಕಲು ನೆನ್ನೆ ಪರವಾನಗಿ ಸಿಕ್ಕಿರುವುದರಿಂದ ಮಕ್ಕಳಿಗೂ ಹಂತ ಹಂತವಾಗಿ ಕೋವಿಡ್ ಲಸಿಕಾಕರಣ ಮಾಡಿ ರಾಜ್ಯದಿಂದ ಹಾಗೂ ಈ ದೇಶದಿಂದ ಕರೋನಾ ಸಾಂಕ್ರಮಿಕ ಕಾಯಿಲೆಯನ್ನ ಸಂಪೂರ್ಣವಾಗಿ ನಿರ್ನಾಮ ಮಾಡುವ ದಿನಗಳು ದೂರವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಅಭಿಪ್ರಾಯಪಟ್ಟರು.
ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ಪ್ರಕ್ರಿಯೆ ಭರದಿಂದ ನಡೆಯುತ್ತಿದ್ದು , ಶೇ.84 ರಷ್ಟು ಜನರು ಮೊದಲ ಡೋಸ್ ನ್ನು ಮತ್ತು ಶೇ.40ರಷ್ಟು ಜನರು ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದಿದ್ದಾರೆ.ಒಟ್ಟಾರೆ ಈವರೆಗೆ ರಾಜ್ಯದಲ್ಲಿ ಆರು ಕೋಟಿ ಡೋಸ್ಗಳ ಲಸಿಕೆ ನೀಡಿರುವುದು ಐತಿಹಾಸಿಕ ಸಾಧನೆಯಾಗಿದೆ. ಇದರಿಂದ ರಾಜ್ಯದಲ್ಲಿ ಕೋವಿಡ್ ಗಣನೀಯವಾಗಿ ಕಡಿಮೆಯಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……