ದೊಡ್ಡಬಳ್ಳಾಪುರ: ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಒಳಚರಂಡಿ ವ್ಯವಸ್ಥೆಯಿಂದಾಗಿ ಕೊಳಚೆ ನೀರು ಕೆರೆ ಸೇರುವಂತಾಗಿದೆ.
ಇಡೀ ನಗರದ ಒಳಚರಂಡಿ ನೀರು ಹರಿದು ಹೋಗುವ ಪೈಪ್ಲೈನ್ ನಾಗರಕೆರೆ ಅಂಗಳದ ಅಂಚಿನಲ್ಲಿ ಹಾಕಲಾಗಿದೆ. ಕೆರೆಯ ಅಂಚಿನಲ್ಲೇ ನಿರ್ಮಿಸಲಾಗಿರುವ ಮ್ಯಾನ್ಹೋಲ್ಗಳು ಹೊಡೆದು ಹೋಗಿ ಕೊಳಚೆ ನೀರು ಹೊರಬರುತ್ತಿವೆ. ಈ ನೀರು ಈಗ ನಾಗರಕೆರೆಯಲ್ಲಿ ಸಂಗ್ರಹವಾಗಿರುವ ಮಳೆ ನೀರಿನೊಂದಿಗೆ ಬೆರೆಯುತ್ತಿವೆ. ಇದರಿಂದಾಗಿ ಕೆರೆಯಲ್ಲಿನ ಶುದ್ಧ ನೀರು ಕಲುಷಿತವಾಗುತ್ತಿದ್ದು ದುರ್ವಾಸನೆ ಬೀರುವಂತಾಗಿದೆ.
ಕೆರೆಯ ಅಂಚಿನ ಸುತ್ತಲು ವಾಯು ವಿಹಾರಕ್ಕಾಗಿ ನಿರ್ಮಿಸಲಾಗಿರುವ ಕಿರು ರಸ್ತೆಯಲ್ಲಿ ನಾಗರೀಕರು ಓಡಾಡುವುದೇ ಕಷ್ಟವಾಗಿದೆ. ಒಳಚರಂಡಿ ನೀರು ಕೆರೆ ಸೇರುತ್ತಿರುವ ಬಗ್ಗೆ ನಗರಸಭೆ ಅಧಿಕಾರಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದರು ಸಹ ಮ್ಯಾನ್ ಹೋಲ್ಗಳನ್ನು ದುರಸ್ಥಿ ಮಾಡಿಸಿಲ್ಲ ಎಂದು ಕೆರೆ ಅಂಚಿನಲ್ಲೇ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ದೂರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……