ದೊಡ್ಡಬಳ್ಳಾಪುರ: ಕೋವಿಡ್ ಪರಿಸ್ಥಿತಿ ಮಾನವೀಯತೆಯ ಇನ್ನೊಂದು ಮುಖವನ್ನು ಪರಿಚಯಿಸಿದ್ದು, ಸಾಮಾಜಿಕ ಸೇವೆಗಳ ಮಹತ್ವ ತಿಳಿಸಿದೆ. ಸಂಘಟನೆಗಳು ತಮ್ಮ ಕಾರ್ಯ ಕ್ಷೇತ್ರವಷ್ಟೇ ಅಲ್ಲದೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಬೇಕಿದೆ ಎಂದು ಚಿತ್ರನಟ ಗರುಡ ರಾಮ್ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವೈದ್ಯಕೀಯ ಘಟಕ, ಅಭಿಷೇಕ್ ನೇತ್ರಧಾಮದ ಸಹಯೋಗದಲ್ಲಿ ತಾಲೂಕಿನ ರಾಜಘಟ್ಟದ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ವೈದ್ಯರು ದಾದಿಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕರ್ಯ ಶ್ಲಾಘನೀಯವಾಗಿದ್ದು, ನಾವು ಸ್ಮರಿಸಬೇಕಿದೆ. ಸಮಾಜಸೇವೆಗೆ ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‍ಕುಮಾರ್ ಮಾದರಿಯಾಗಿದ್ದು ಅವರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ಯುವಕರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅವರ ಮೊದಲ ಪ್ರಾಶಸ್ತ್ಯ ಆಗಲಿ ಎಂದ ಅವರು ಕರವೇ ಆರೋಗ್ಯ ಶಿಬಿರದ ಆಯೋಜನೆಯನ್ನು ಶ್ಲಾಘಿಸಿ, ದೊಡ್ಡಬಳ್ಳಾಪುರದ ಒಡನಾಟವನ್ನು ಸ್ಮರಿಸಿದರು.
ಸಂಪಿಗೆ ನಗರದ ಡಿವೈಎಸ್‍ಪಿ ಟಿ.ರಂಗಪ್ಪ ಮಾತನಾಡಿ, ಇಂದಿನ ಯುವಕರು ವಯೋವೃದ್ದರನ್ನು ಕಡೆಗಣಿಸದೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿದೆ. ನಮ್ಮಂತೆಯೇ ಸಮಾಜ ಎಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ದುಶ್ಚಟಗಿಗೆ ದಾಸರಾಗಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ಸುಬ್ರಹ್ಮಣ್ಯ , ಜೋಗಳ್ಳಿ ಅಮ್ಮು, ರಾಜಘಟ್ಟ ಮಹೇಶ್, ಕಾರಹಳ್ಳಿ ಮಂಜು, ನವೀನ್ ಕ್ಷತ್ರೀಯ, ಕೋಡಿಹಳ್ಳಿ ಬಾಬು , ರಾಜಘಟ್ಟ ಗ್ರಾಪಂ ಸದಸ್ಯರಾದ ಎ.ಶಿವಕುಮಾರ್, ಆನಂದ್, ಮುನಿರಾಜು, ವೈದ್ಯರಾದ ಡಾ.ಅರ್ಜುನ್,ಡಾ.ಮಹೇಶ್, ಡಾ.ಅರ್ಚನ, ಡಾ.ಗೌರಿಶಂಕರ್, ಡಾ.ಮಧು, ಡಾ.ಪ್ರಸನ್ನ, ಪ್ರದೀಪ್ (ಮೆಡಿಕಲ್ಸ್) , ಮೆಡಲ್ಯಾಬ್ ತಿಪ್ಪೇಸ್ವಾಮಿ, ಅಭಿಷೇಕ್ ನೇತ್ರಧಾಮದ ಸಿಬ್ಬಂದಿ ಹಾಜರಿದ್ದರು.
ಶಿಬಿರದಲ್ಲಿ 180ಕ್ಕೂ ಹೆಚ್ಚು ನೇತ್ರ ತಪಾಸಣೆಯ ಪ್ರಯೋಜನ ಪಡೆದರು.100 ಮಂದಿಗೆ ಉಚಿತ ಕನ್ನಡಕಗಳನ್ನು ನೀಡಲಾಯಿತು. ಉಳಿದಂತೆ 150 ಹೆಚ್ಚು ಮಂದಿ ವಿವಿಧ ಆರೋಗ್ಯ ತಪಾಸಣೆ ಪ್ರಯೋಜನ ಪಡೆದರು. ಅಗತ್ಯ ಇದ್ದವರಿಗೆ ಉಚಿತ ಔಷಗಳನ್ನು ಉಚಿತವಾಗಿ ನೀಡಲಾಯಿತು. 75 ಮಂದಿ ನೇತ್ರದಾನ ನೋಂದಣಿ ಮಾಡಿಸಿಕೊಂಡರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……