ಬೆಂ.ಗ್ರಾ.ಜಿಲ್ಲೆ: ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಮುಂಗಾರು-2021ರ ಮಾರ್ಗಸೂಚಿಯಂತೆ ಕಟಾವಿನ ನಂತರ ಪ್ರಕೃತಿ ವಿಕೋಪ ಉಂಟಾಗಿ ಬೆಳೆ ನಾಶವಾದರೆ, ವೈಯಕ್ತಿಕವಾಗಿ(case to case basis) ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ, ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು, ವಿಮೆಯಲ್ಲಿ ನೋಂದಾಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು, ಬೆಳೆ ನಷ್ಟವಾದಲ್ಲಿ, ಸಂಬಂಧಿಸಿದ ವಿಮಾ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸುವುದು.
ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ(Post Harvest Losess), ಕಟಾವು ಮಾಡಿದ ಎರಡು ವಾರಗಳೊಳಗೆ(ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯುಕ್ತಿಕವಾಗಿ(Case To Case Basis ) ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ, ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಸೂಚಿತ ರಾಗಿ(ಮಳೆಯಾಶ್ರಿತ ಮತ್ತು ನೀರಾವರಿ), ಭತ್ತ(ನೀರಾವರಿ), ಮುಸುಕಿನ ಜೋಳ(ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ(ಮಳೆಯಾಶ್ರಿತ ಮತ್ತು ನೀರಾವರಿ), ಹುರುಳಿ(ಮಳೆಯಾಶ್ರಿತ) ಮತ್ತು ನೆಲಗಡಲೆ(ಮಳೆಯಾಶ್ರಿತ) ಬೆಳೆಗಳನ್ನು ಒಳಪಡಿಸಲಾಗಿದೆ.
ವಿಮೆಯಲ್ಲಿ ನೋಂದಾಯಿಸಿದ ಜಿಲ್ಲೆಯ ರೈತರು, ಬೆಳೆ ನಷ್ಟವಾದಲ್ಲಿ, ಈ ಬಗ್ಗೆ ಸಂಬಂಧಪಟ್ಟ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ನೇರವಾಗಿ ಅಥವಾ ಕೃಷಿ ಇಲಾಖೆ ಮೂಲಕ, ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳೊಂದಿಗೆ 72 ಗಂಟೆಗಳೊಳಗಾಗಿ ತಿಳಿಸುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿಮಾ ಸಂಸ್ಥೆಯಾಗಿ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿ, ಆಯ್ಕೆಯಾಗಿದ್ದು, ದೇವನಹಳ್ಳಿ ಮುಖ್ಯ ರಸ್ತೆಯ ಕುಂದಾಣ ಹೋಬಳಿಯಲ್ಲಿರುವ ವಿಶ್ವನಾಥಪುರದ ಕೆವಿಎಂ ಆರ್ಕೆಡ್‍ನಲ್ಲಿ ವಿಮೆ ಸಂಸ್ಥೆಯ ಕಚೇರಿ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ, ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ದೇವನಹಳ್ಳಿ ತಾಲ್ಲೂಕಿನಲ್ಲಿ ಕಾಂತಕುಮಾರ್ ಮೊ.ಸಂ.: 9341627547, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮುನಿನಾರಾಯಣ ಮೊ.ಸಂ.: 9740185030, ಹೊಸಕೋಟೆ ತಾಲ್ಲೂಕಿನಲ್ಲಿ ಶ್ರೀನಿವಾಸಮೂರ್ತಿ ಮೊ.ಸಂ.: 9900450778 ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ ಕುಮಾರಸ್ವಾಮಿ.ಜಿ ಮೊ.ಸಂ.: 8495072375 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……