ಬೆಂಗಳೂರು: ಸಲಗ ಗೆಲುವಿನ ಸಂಭ್ರಮದಲ್ಲಿ ಹೊಸ ಚಿತ್ರಗಳಿಗೆ ಸಜ್ಜಾಗುತ್ತಿದ್ದ ನಟ ದುನಿಯಾ ವಿಜಯ್ ಗೆ ಆಘಾತವೊಂದು ಎದುರಾಗಿದ್ದು, ವಿಜಯ್ ತಂದೆ ರುದ್ರಪ್ಪ (81 ವರ್ಷ) ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರುದ್ರಪ್ಪ ಇಂದು ನಿಧನರಾಗಿದ್ದಾರೆ.
ವಿಜಯ್ ತಂದೆ ಅಂತ್ಯಕ್ರಿಯೆ ಆನೇಕಲ್ ನ ಕುಂಬಾರಹಳ್ಳಿಯಲ್ಲಿ ನಡೆಯಲಿದೆ ಎಂದು ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ.
ಕಳೆದ ಜುಲೈನಲ್ಲಿ ದುನಿಯಾ ವಿಜಯ್ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಕುಂಬಾರಹಳ್ಳಿಯಲ್ಲಿ ತಾಯಿ ಅಂತ್ಯಕ್ರಿಯೆ ನಡೆಸಿದ್ದ ವಿಜಯ್, ಅಲ್ಲಿಯೇ ತಾಯಿ ಸಮಾಧಿ ಹಾಗೂ ತಾಯಿಯ ಪುತ್ಥಳಿ ನಿರ್ಮಿಸಿ ಗೌರವ ಸಲ್ಲಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……