ದೊಡ್ಡಬಳ್ಳಾಪುರ: ನಗರದ ಟಿ.ಬಿ.ಸರ್ಕಲ್ ಸಮೀಪದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ರಾಣುಸಂತೂಬಾಯಿ ದೇವಿಯರ ಸ್ಥಿರ ಬಿಂಬ, ಪ್ರತಿಷ್ಠಾಪನೆ ಮತ್ತು ಕುಂಬಾಭಿಷೇಕ ಮಹೋತ್ಸವ ಸಡಗರದಿಂದ ನಡೆಯಿತು.
ಜೀರ್ಣೋದ್ಧಾರ ಅಂಗವಾಗಿ ಸೋಮವಾರ ಬೆಳಗ್ಗೆ ಪ್ರಾಣ ಪ್ರತಿಷ್ಠಾಪನೆ, ಕಳಾವಾಹನ, ಕದಳೀ ವೃಕ್ಷ ಛೇದನ, ರುದ್ರ ಹೋಮ, ಲಕ್ಷ್ಮೀ ನಾರಾಯಣ ಹೋಮ, ಚಂಡಿಕಾ ಹೋಮ, ಪ್ರತಿಷ್ಠಾ ಹೋಮ, ಮಹಾಪೂರ್ಣಾಹುತಿ, ಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಆಗಮಿಕರಾದ ಪಿ.ಗೋಪಿಕೃಷ್ಣ ಶರ್ಮ, ವಿ.ಎಸ್.ಚಂದ್ರಮೌಳಿ ಶಾಸ್ತ್ರಿ ಮತ್ತು ಕೆ.ಎನ್.ರವೀಂದ್ರ ನಾಥ ಶರ್ಮ ನೇತೃತ್ವದಲ್ಲಿ ಅದ್ದೂರಿಯಾಗಿ ಪ್ರತಿಷ್ಠಾಪನೆ ಕಾರ್ಯ ಸಂಪನ್ನಗೊಂಡಿತು.
ಜೀರ್ಣೋದ್ಧಾರ ಅಂಗವಾಗಿ ಮುಂದಿನ 48 ದಿನಗಳು ಮಂಡಲ ಪೂಜೆ ಅಂಗವಾಗಿ ಪ್ರತಿ ದಿನ ಮಹಾಮಂಗಳಾರತಿ, ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ ಇರಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……