ದೊಡ್ಡಬಳ್ಳಾಪುರ: ಈ ಸಂಸ್ಥೆಯ 2022-23ನೇ ಸಾಲಿನ ದಾಖಲಾತಿಗಾಗಿ 2021-22ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿರುವ ಶಾಲಾ ಮಕ್ಕಳಿಂದ ಅನ್ ಲೈನ್ ಇಲ್ಲವೇ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜವಾಹರ ನವೋದಯ ವಿದ್ಯಾಲಯ, ಬೆಂಗಳೂರು ಗ್ರಾಮಾಂತರ ಪ್ರಾಂಶುಪಾಲರಾದ ಆರ್.ಚಕ್ರವರ್ತಿ, ಬೆಂಗಳೂರು ಗ್ರಾಮಾಂತರ ನವೋದಯ ವಿದ್ಯಾಲಯದಲ್ಲಿ 6 ನೆಯ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ನ.30 ಕೊನೆಯ ದಿನ ಆಗಿದೆ.
ಪ್ರತಿಭಾವಂತ ಗ್ರಾಮೀಣ ಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶ. ಗುಣಮಟ್ಟದ ಮತ್ತು ಉಚಿತ ಶಿಕ್ಷಣ ಬಯಸುವ, 5 ನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ನಿಗದಿಪಡಿಸಿದ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಕೋರಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……