ದೊಡ್ಡಬಳ್ಳಾಪುರ: ಸನ್ನದ್ಧ ಸಂಸ್ಥೆವತಿಯಿಂದ ಸ್ವಾಮಿ ವಿವೇಕಾನಂದರ 159ನೇ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ 6ನೇ ಕನ್ನಡ ಪುಸ್ತಕ ಓದಿ-ಬಹುಮಾನ ಗೆಲ್ಲಿ-2021-22 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಕ್ಕಳಲ್ಲಿ ವ್ಯಾಪಕ ಓದು ಮತ್ತು ಚಿಂತನಾಶೀಲತೆಯನ್ನು ರೂಢಿಸವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಈ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರ ಜಾಗೃತಿ ಕೃತಿಗಳ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಈ ಸ್ಪರ್ಧೆಯಲ್ಲಿ ಪೋಷಕರು, ಶಿಕ್ಷಕರು, ಕನ್ನಡಾಭಿಮಾನಿಗಳು ಸಹ ಭಾಗವಹಿಸಬಹುದಾಗಿದೆ.
ಡಿಸೆಂಬರ್ 1 ರಿಂದ 18 ರವೆರೆಗೆ ಪುಸ್ತಕಗಳು ಲಭ್ಯವಿರುತ್ತವೆ. ಡಿ.26 ಭಾನುವಾರ ಬೆಳೆಗ್ಗೆ 10:30 ರಿಂದ 11:30 ರವರೆಗೆ ಎಂ.ಎ.ಬಿ.ಎಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿಪರೀಕ್ಷೆ ನಡೆಯಲಿದೆ.
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಬಹುಮಾನಗಳು ನೀಡಲಾಗುತ್ತಿದ್ದು, ಪುಸ್ತಕದ ಬೆಲೆ ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ ರೂ 14.00 / ರಾಷ್ಟ್ರ ಜಾಗೃತಿ ರೂ 9.00 ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9620819037ಗೆ ಸಂಪರ್ಕಿಸಬಹುದೆಂದು ಸನ್ನದ್ಧ ಸಂಸ್ಥೆಯ ಅಧ್ಯಕ್ಷ ಶ್ರೀ ಭಾಸ್ಕರ್.ಎನ್ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….