ದೊಡ್ಡಬಳ್ಳಾಪುರ: ಸ್ಪಿಕ್ ಲಿಮಿಟೆಡ್ ಹಾಗೂ ಗ್ರೀನ್ ಸ್ಟಾರ್ ಫರ್ಟಿಲೈಸರ್ಸ ಇವರ ಸಹಯೋಗದೊಂದಿಗೆ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ರೈತರ ತರಬೇತಿ ಕಾರ್ಯವನ್ನು ಆಯೋಜಿಸಲಾಗಿತ್ತು.
ಅನ್ನ ಪೂರ್ಣ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ತಹಶೀಲ್ದಾರ್ ಎಚ್.ಎಸ್.ನರಸಿಂಹ ಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯನಾರಾಯಣ ರಾವ್ ವಹಿಸಿದ್ದರು.
ಮುಖ್ಯ ಅತಿಥಿ ಸುಬ್ಬೇಗೌಡ ಮಾತನಾಡಿ, ಅಗತ್ಯ ಪ್ರಮಾಣದ ರಸಗೊಬ್ಬರ ಬಳಕೆ ಭೂಮಿಯ ಆರೋಗ್ಯ ಹಾಗೂ ಉತ್ತಮ ಇಳುವರಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಂಪನಿಯ ಕ್ಷೇತ್ರ ಮಾರಾಟಗಾರ ಹಾಗು ಕಾರ್ಯಕ್ರಮ ಆಯೋಜಕ ಮಂಜುನಾಥ, ಎಸ್.ಎಲ್.ಎನ್ ಆಗ್ರೋ ದ ವ್ಯವಸ್ಥಾಪಕ ರಂಗಪ್ಪ ಹಾಗೂ ಅನೇಕ ಪ್ರಗತಿ ಪರ ರೈತರು ಬಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….