ದೊಡ್ಡಬಳ್ಳಾಪುರ: ದೇವಾಲಯದಲ್ಲಿ ಪೂಜೆ ಮುಗಿಸಿ ಮನೆಗೆ ತೆರಳವ ವೇಳೆ, ಬೀದಿ ನಾಯಿಯೊಂದು ದಾಳಿ ಮಾಡಿದ ಪರಿಣಾಮ ಅಯ್ಯಪ್ಪ ಮಾಲಾಧಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಇಸ್ಲಾಂಪುರದಲ್ಲಿ ಸಂಭವಿಸಿದೆ.
ದರ್ಗಾಜೋಗಹಳ್ಳಿ ನಿವಾಸಿ ವಿಜಯಕುಮಾರ್ (55ವರ್ಷ) ಎನ್ನುವವರು ಅಯ್ಯಪ್ಪ ಮಾಲೆ ಧರಸಿದ್ದು, ಇಂದು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮನೆಗೆ ತೆರಳುವ ವೇಳೆ ಬೀದಿ ನಾಯಿಯ ದಾಳಿಗೆ ಒಳಗಾಗಿದ್ದಾರೆ.
ಬೀದಿ ನಾಯಿ ದಾಳಿಯ ಕಂಡ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ವಿಜಯಕುಮಾರ್ ಅವರನ್ನು ರಕ್ಷಿಸಿದ್ದಾರೆ. ದಾಳಿಯಿಂದಾಗಿ ವಿಜಯಕುಮಾರ್ ಅವರಿಗೆ ತೀವ್ರವಾದ ರಕ್ತಸ್ರಾವವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ನಗರಸಭೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕು ಮುನ್ನಾ ಇದೇ ವ್ಯಾಪ್ತಿಯಲ್ಲಿ 6 ಮಂದಿ ನಾಯಿಯ ದಾಳಿಗೆ ಒಳಗಾಗಿದ್ದಾರೆಂದು ಸ್ಥಳೀಯರು ಅಳಲನ್ನು ತೋಡಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….