ದೊಡ್ಡಬಳ್ಳಾಪುರ: ಡಿ.23 ರಂದು ನಡೆಯಲಿರುವ ರೈತ ದಿನಾಚರಣೆ ಅಂಗವಾಗಿ ನಗರದ ಡಿ.ಕ್ರಾಸ್ ಬಳಿಯಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಹಾಗೂ ಉತ್ತಮ ಆಡಳಿತ ವಿಶೇಷ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಿ, ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ಪ್ರತಿಯನ್ನು ನೀಡಲಾಯಿತು.
ಸಭೆಯಲ್ಲಿ ತಾಲೂಕು ಮಟ್ಟದ ರೈತ ದಿನಾಚರಣೆಯನ್ನು ತೂಬಗೆರೆ ಹೋಬಳಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಟಿ.ಆಂಜಿನೇಗೌಡ, ಉಪಾಧ್ಯಕ್ಷ ಜಯರಾಮು, ನಿರ್ದೇಶಕರಾದ ಉಗ್ರಪ್ಪ, ಮುನಿಯಪ್ಪ, ಗೋಪಾಲರೆಡ್ಡಿ, ರಾಮಾಂಜಿನಪ್ಪ, ಎಂ.ಜಿ.ಜಗನ್ನಾಥ್, ಸಹಾಯಕ ನಿರ್ದೇಶಕಿ ಸುಶೀಲಮ್ಮ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಹಾಯಕ ರೇಷ್ಮೆ ನಿರ್ದೇಶಕ ಉದಯ್, ಪಶುಸಂಗೋಪನಾ ನಿರ್ದೇಶಕ ಆಂಜಿನಪ್ಪ, ವಲಯ ಅರಣ್ಯ ಅಧಿಕಾರಿ ಗೀತಾ, ತಾಂತ್ರಿಕ ಅಧಿಕಾರಿ ರೂಪ ಸೇರಿದಂತೆ ಕೃಷಿ ಇಲಾಖೆಯ ಹೋಬಳಿ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….