ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಆಚಾರ್ಲಹಳ್ಳಿ ಗ್ರಾಮದ ನಂದಿ ಬೆಟ್ಟದ ಬಳಿ ಕ್ಯಾಪಿಟಲ್ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಭೂಮಿಯನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ತಾಲೂಕಿನ ನಂದಿಬೆಟ್ಟ ಸಮೀಪದ ಆಚಾರ್ಲಹಳ್ಳಿ ಸರ್ವೆ ನಂಬರ್ 38ರಲ್ಲಿ ಇದ್ದ ಗೋಮಾಳವನ್ನು ಕ್ಯಾಪಿಟಲ್ ರೆಸಾರ್ಟ್ ಮಾಲೀಕರು ಹಾಗೂ ಪಕ್ಕದ ಮತ್ತೊಬ್ಬರು ಸೇರಿ ಸುಮಾರು 3ಕೋಟಿಗೂ ಹೆಚ್ಚು ಬೆಲೆ ಬಾಳುವ 2.06 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು.
ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಒತ್ತುವರಿ ತೆರವುಗೊಳಿಸಿ, ಸರ್ಕಾರಿ ಗೋಮಾಳ, ಅತಿಕ್ರಮಣ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಫಲಕ ಹಾಕಿದರು.
ಒತ್ತುವರಿ ತೆರವು ಸಂದರ್ಭದಲ್ಲಿ ಉಪ ತಹಶೀಲ್ದಾರ್ ವೆಂಕಟೇಶ ಮೂರ್ತಿ, ರಾಜಸ್ವ ನಿರೀಕ್ಷಕಿ ಲಕ್ಷ್ಮಮ್ಮ, ಗ್ರಾಮ ಲೆಕ್ಕಿಗರಾದ ಕಿರಣ್ ಕುಮಾರ್, ರಾಜಶೇಖರ್, ಪ್ರಮೋದ್, ಗಂಗರಾಜು ಮತ್ತಿತರರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….