ದೊಡ್ಡಬಳ್ಳಾಪುರ: ಎಂಇಎಸ್ ದಬ್ಬಾಳಿಕೆ, ಪುಂಡಾಟಿಕೆ ವಿರೋಧಿಸಿ, ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಡಿಸೆಂಬರ್ 31ರಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್ಗೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಪೂರ್ಣ ಬೆಂಬಲವಿದೆ ಎಂದು ಸಂಸ್ಥಾಪಕರಾದ ರವಿ ಮಾವಿನಕುಂಟೆ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಚಾರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ತಿರ್ಪು ನೀಡಿದಂತೆ ಮತ್ತು ಕೇಂದ್ರ ಸರ್ಕಾರದ ಜಸ್ಟಿಸ್ ಮೆಹರ್ ಚಂದ್ ಮಹಾಜನ್ ನೇತೃತ್ವದಲ್ಲಿ ಮಹಾಜನ್ ಆಯೋಗ ವರದಿಯ ಅಂತಿಮ ಆದೇಶವಿದ್ದರು ಕೂಡ ನಮ್ಮನ್ನಾಳುವ ಸರ್ಕಾರಗಳು ಕ್ರಮ ವಹಿಸದಿರುವುದು ನಮ್ಮ ದೌರ್ಭಾಗ್ಯ.
ದೇಶದಲ್ಲಿ ಎಂಇಎಸ್ ಪುಂಟಾಟ ಮಿತಿಮೀರಿದೆ ಮಹಾನ್ ಪುರುಷರಾದ ಬಸವಣ್ಣ, ಸಂಗೊಳ್ಳಿರಾಯಣ್ಣರ ಪ್ರತಿಮೆ ಭಗ್ನಗೊಳಿಸುವುದು, ನಾಡಿನ ಬಾವುಟ ಸುಡುವ ಮೂಲಕ ಎರಡು ರಾಜ್ಯಗಳ ಜನರ ನಡುವೆ ಸಾಮರಸ್ಯ ಕದಡುತ್ತಿದ್ದಾರೆ.
ರಾಜ್ಯದ ರಾಜಕಾರಣಿಗಳಿಗೆ ನಾಡಿನ ಕುರಿತಾದ ಬದ್ಧತೆ ಇಲ್ಲವಾಗಿದೆ. ಒಬ್ಬ ಜನ ಪ್ರತಿನಿಧಿ ಬಹಿರಂಗ ಹೇಳಿಕೊಡ್ತಾರೆ ಎಂಇಎಸ್ ವಿರುದ್ಧ ಆರೋಪ ಮಾಡಲ್ಲ ಎಂದು. ಮಹಾರಾಷ್ಟ್ರ ಮುಖ್ಯಮಂತ್ರಿ ಪುಂಡರ ಮಟ್ಟದ ಆಕದೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಒತ್ತಾಯಿಸುತ್ತಾರೆ ಇದು ನಾಚಿಕೆಗೇಡಿನ ಸಂಗತಿ.
ನಮ್ಮ ರಾಜ್ಯಕ್ಕೆ ಒಮ್ಮೆ ಕಾವೇರಿ ವಿವಾದ, ಒಮ್ಮೆ ಗಡಿ ವಿವಾದವೇ ಆದರೆ ನಾಡಿನ ಅಭಿವೃದ್ಧಿ ಹೇಗೆ ಸಾಧ್ಯ..? ಬೆಳಗಾವಿ ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕೇವಲ ವಿಧಾನಸಭೆಯಲ್ಲಿ ಖಂಡನೆ ನಿರ್ಣಯದಿಂದ ಎಲ್ಲವು ಅಂತ್ಯವಲ್ಲ. ನಮ್ಮ ರಾಜ್ಯ ಸರ್ಕಾರ ಪುಂಡರ ಮಟ್ಟಹಾಕುವುದು ಹಾಗೂ ಎಂಇಎಸ್ ಸಂಘಟನೆ ನಿಷೇಧ ಮಾಡಬೇಕಿದೆ.
ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಕೇವಲ ಒಂದು ದಿನದ ಹೋರಾಟ, ಪ್ರತಿಭಟನೆಗೆ ಸೀಮಿತವಾಗಿರುವುದಿಲ್ಲ. ಎಂಇಎಸ್ ಪುಂಡಾಟಿಕೆ ವಿರುದ್ಧ ತುರ್ತು ಕ್ರಮ ಮತ್ತು ನಿಷೇಧ ಹೇರಲು ಪ್ರಧಾನಿ ಮೋದಿಯವರಿಗೆ, ಕೇಂದ್ರ ಗೃಹ ಸಚಿವರಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯ ಗೃಹ ಸಚಿವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗುತ್ತಿದೆ. ಇದಕ್ಕೆ ಸ್ಪಂದನೆ ಸಿಗದಿದಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದು ಹಾಗೂ ಬೀದಿಗಿಳಿದು ಹೋರಾಟ ನಡೆಸಲಾಗುವುದು.
ಕನ್ನಡದ ವಿಚಾರ ಬಂದಾಗ ಒಗ್ಗಟ್ಟು ಅಗತ್ಯವಾಗಿದೆ. ನಾಡು, ಭಾಷೆ ವಿಚಾರವಾಗಿ ಕೇವಲ ಕನ್ನಡ ಪರ ಸಂಘಟನೆ ಮಾತ್ರವಲ್ಲದೆ ಎಲ್ಲರೂ ಭಿನ್ನಾಭಿಪ್ರಾಯ ಬದಿರಿಸಿ ಒಂದಾಗಿ ಹೋರಾಟ ನಡೆಸಬೇಕಿದೆ.
ಎರಡು ನಾಡಿನ ನಡುವೆ ಕಿಚ್ಚಿಡಲು ಶಡ್ಯಂತ್ರವನ್ನ ರಾಜ್ಯ ಸರ್ಕಾರ ಪತ್ತೆ ಹಚ್ಚಬೇಕಿದೆ. ಮಹಾಪುರುಷರ ಪ್ರತಿಮೆ ಭಗ್ನ ಹಾಗೂ ಕನ್ನಡ ಬಾವುಟ ಸುಟ್ಟಿರುವ ಪ್ರಕರಣದ ಹಿಂದೆ ಒಂದು ಪಕ್ಷದ ಕಾರ್ಯಕರ್ತರ ಹೆಸರು ಕೇಳಿಬಂದಿದ್ದು, ಕೇವಲ ಆರೋಪಕ್ಕೆ ಸೀಮಿತವಾಗದೆ ಶಡ್ಯಂತ್ರ ನಡೆಸಿದವರ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ರವಿ ಮಾವಿನಕುಂಟೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣಿ, ತಾಲೂಕು ಅಧ್ಯಕ್ಷ ಸೊಣ್ಣಪ್ಪನಹಳ್ಳಿ ರಮೇಶ್, ಜಿ.ಯು ಅಧ್ಯಕ್ಷ ಮಂಜುನಾಥ್ ನಾಯಕ್, ತಾ.ಕಾರ್ಯಾದ್ಯಕ್ಷ ನವೀನ್ ಕುಮಾರ್, ಯಮನೂರ್, ಪ್ರಕಾಶ್, ಬಾಬು, ಅನಿಲ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….