ಜನವರಿಯಿಂದ ಮಕ್ಕಳಿಗೆ ಕರೊನಾ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ಹೊಸದಿಲ್ಲಿ: ದೇಶದಲ್ಲಿ ಇದೇ ಜನವರಿ 3 ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಜತೆಗೆ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್‌ ವರ್ಕರ್ಸ್‌ ಮತ್ತು 60 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಇರುವವರಿಗೆ ಬೂಸ್ಟರ್‌ ಡೋಸ್‌ ಕೂಡ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಘೋಷಣೆಗಳನ್ನು ಮಾಡಿದರು.

ಭಾರತದಲ್ಲಿ 18 ಲಕ್ಷ ಐಸೋಲೇಷನ್‌ ಬೆಡ್‌ ಇದ್ದು, ಐದು ಲಕ್ಷ ಆಕ್ಸಿಜನ್‌ ಬೆಂಬಲಿತ ಹಾಸಿಗೆಗಳು, 1.4 ಲಕ್ಷ ಐಸಿಯು ಬೆಡ್‌ಗಳು, 90,000 ಮಕ್ಕಳ ಐಸಿಯು ಮತ್ತು ನಾನ್‌ ಐಸಿಯು ಬೆಡ್‌ಗಳಿವೆ. ನಮ್ಮಲ್ಲಿ 3,000 ಕ್ಕೂ ಹೆಚ್ಚು ಪಿಎಸ್‌ಎ ಆಮ್ಲಜನಕ ಘಟಕಗಳಿವೆ, 4 ಲಕ್ಷ ಆಮ್ಲಜನಕ ಸಿಲಿಂಡರ್‌ಗಳನ್ನು ರಾಷ್ಟ್ರದಾದ್ಯಂತ ವಿತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದರು.

ಭಾರತವು ಶೀಘ್ರದಲ್ಲೇ ಮೂಗಿನ ಮೂಲಕ ಪಡೆದುಕೊಳ್ಳುವ ಕರೊನಾ ಲಸಿಕೆ ಮತ್ತು ವಿಶ್ವದ ಮೊದಲ ಡಿಎನ್‌ಎ ಲಸಿಕೆಯನ್ನು ಹೊಂದಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್-19ರ ಗಂಭೀರತೆಯನ್ನು ಅರಿತು ಇಂದು ಭಾರತದಲ್ಲಿ 141 ಕೋಟಿಗೂ ಹೆಚ್ಚು ಕರೊನಾ ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ. ದೇಶದ ಶೇ. 90 ಕ್ಕಿಂತ ಹೆಚ್ಚು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಇದೇ ವೇಳೆ ಜನರು ಗಾಬರಿಯಾಗುವ ಅಗತ್ಯವಿಲ್ಲ. ಜಾಗರೂಕರಾಗಿರಿ ಮತ್ತು ಕೋವಿಡ್ ಮಾನದಂಡಗಳನ್ನು ಅನುಸರಿಸಿ. ಸರಿಯಾಗಿ ಮಾಸ್ಕ್‌ ಧರಿಸಿ, ಆಗಾಗ ಕೈಗಳನ್ನು ತೊಳೆಯುತ್ತಿರಿ ಎಂದು ಕಿವಿಮಾತು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ದೊಡ್ಡಬಳ್ಳಾಪುರ: 134 ಎಕರೆ ಜಮೀನಿನಲ್ಲಿ ಟೆರಾಫಾರ್ಮ ತ್ಯಾಜ್ಯ ವಿಲೇವಾರಿ ಘಟಕ ಮತ್ತೆ ಆರಂಭ..?

ದೊಡ್ಡಬಳ್ಳಾಪುರ: 134 ಎಕರೆ ಜಮೀನಿನಲ್ಲಿ ಟೆರಾಫಾರ್ಮ ತ್ಯಾಜ್ಯ ವಿಲೇವಾರಿ ಘಟಕ ಮತ್ತೆ ಆರಂಭ..?

ಬೆಳಗಾವಿ: ಬಿಬಿಎಂಪಿ (BBMP) ತ್ಯಾಜವಿಲೇವಾರಿ ಘಟಕದಿಂದ ದೊಡ್ಡಬಳ್ಳಾಪುರ ತಾಲೂಕಿನ ಜನತೆ ನೆಮ್ಮದಿ ಕಳೆದುಕೊಂಡಿರುವ ಬೆನ್ನಲ್ಲೇ, ಗುಂಡ್ಲಹಳ್ಳಿ ಸಮೀಪ 134.10 ಎಕರೆ ಜಮೀನಿನಲ್ಲಿ ಮತ್ತೆ ಟೆರಾಫಾರ್ಮ ತ್ಯಾಜ್ಯ ವಿಲೇವಾರಿ ಘಟಕ (Terraforma Waste Disposal Unit)

[ccc_my_favorite_select_button post_id="117199"]
23 ಕಂಬಳೋತ್ಸವಕ್ಕೆ ತಲಾ ರೂ.5ಲಕ್ಷ ಅನುದಾನ ಬಿಡುಗಡೆ: ಎಚ್.ಕೆ.ಪಾಟೀಲ್

23 ಕಂಬಳೋತ್ಸವಕ್ಕೆ ತಲಾ ರೂ.5ಲಕ್ಷ ಅನುದಾನ ಬಿಡುಗಡೆ: ಎಚ್.ಕೆ.ಪಾಟೀಲ್

23 ಕಂಬಳೋತ್ಸವಗಳಿಗೆ ಸರ್ಕಾರದಿಂದ ತಲಾ ರೂ.5 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ (H.K. Patil) ಹೇಳಿದರು.

[ccc_my_favorite_select_button post_id="117203"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

"ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="117115"]
ಮಹಿಳೆಯರೆ ಎಚ್ಚರ: ಬಾಲ ಬಿಚ್ಚಿದ ಸರಗಳ್ಳರು‌‌.. 24 ಗಂಟೆ ಅಂತರದಲ್ಲಿ ದೊಡ್ಡಬಳ್ಳಾಪುರ ತಾಲೂಕು ಸೇರಿ 3 ಕಡೆ ಮಾಂಗಲ್ಯ ಸರ ಕಳವು

ಮಹಿಳೆಯರೆ ಎಚ್ಚರ: ಬಾಲ ಬಿಚ್ಚಿದ ಸರಗಳ್ಳರು‌‌.. 24 ಗಂಟೆ ಅಂತರದಲ್ಲಿ ದೊಡ್ಡಬಳ್ಳಾಪುರ ತಾಲೂಕು

ಕೆಲ ದಿನಗಳಿಂದ ಸದ್ದಡಗಿದ್ದ ಸರ ಕಳ್ಳರ ಹಾವಳಿ ತಾಲೂಕಿನಲ್ಲಿನ ಮತ್ತೆ ಕೇಳಿ ಬಂದಿದ್ದು, 24 ಗಂಟೆ ಅವಧಿಯಲ್ಲಿ ದೊಡ್ಡಬಳ್ಳಾಪುರದ ಎರಡು ಕಡೆ ಮಾಂಗಲ್ಯ ಸರ (Mangalya chain) ಕಳ್ಳತನ (Theft) ನಡೆದಿರುವುದು ವರದಿಯಾಗಿದೆ.

[ccc_my_favorite_select_button post_id="117099"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ಸಿನಿಮಾ ಬಿಡುಗಡೆ ವೇಳೆ ದರ್ಶನ್ ವಿರುದ್ಧ ಮಾಧ್ಯಮಗಳ ಸುಳ್ಳು ಸುದ್ದಿ: ಇದೇನಾ..? ಪತ್ರಿಕೋದ್ಯಮ ಎಂದು ವಿಜಯಲಕ್ಷ್ಮಿ ದರ್ಶನ್ ಕಿಡಿ

ಸಿನಿಮಾ ಬಿಡುಗಡೆ ವೇಳೆ ದರ್ಶನ್ ವಿರುದ್ಧ ಮಾಧ್ಯಮಗಳ ಸುಳ್ಳು ಸುದ್ದಿ: ಇದೇನಾ..? ಪತ್ರಿಕೋದ್ಯಮ

ಅಭಿಮಾನಿಗಳ ದಾಸ, ಚಾಲೆಂಜಿಗ್ ಸ್ಟಾರ್ ದರ್ಶನ್ (Darshan) ಅಭಿನಯದ, ಪ್ರಕಾಶ್ ವೀರ್ ನಿರ್ದೇಶನದ ''ದಿ ಡೆವಿಲ್' (The Devil) ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ.

[ccc_my_favorite_select_button post_id="117208"]
error: Content is protected !!