ದೊಡ್ಡಬಳ್ಳಾಪುರ: 2021-22 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಕ್ವಿಂಟಲ್ಗೆ ರೂ3377 ಬೆಲೆಯಲ್ಲಿ ರಾಗಿ ಖರೀದಿಸಲು ಆರಂಭಿಸಿಲಾಗಿದೆ
ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಖರೀದಿ ಕೇಂದ್ರದಲ್ಲಿ ಖರೀದಿಸಲಾದ ರಾಗಿಯನ್ನು ಪಡಿತರ ಮೂಲಕ ಬಡವರಿಗೆ ನೀಡುವುದರಿಂದ ರೈತರು ಸಾಧ್ಯವಾದಷ್ಟು ಸ್ವಚ್ಚವಾದ ರಾಗಿಯನ್ನು ನೀಡಬೇಕಿದೆ.
ದಲ್ಲಾಳಿಗಳ ಹಾವಳಿ ಕುರಿತು ಈಗಾಗಲೇ ವ್ಯಾಪಕ ದೂರುಗಳು ಬಂದಿದ್ದು, ಅಂತಹ ದಲ್ಲಾಳಿಗಳ ಕುರಿತು ಮಾಹಿತಿ ಇದ್ದಲ್ಲಿ ರೈತರು ನನಗಾಗಲಿ ಅಥವಾ ತಹಶೀಲ್ದಾರ್ ಅವರಿಗಾಗಲಿ ನೀಡಬಹುದು, ಮಾಹಿತಿ ನೀಡಿದ ರೈತರ ಹೆಸರನ್ನು ಗೌಪ್ಯವಾಗಿಡಿಸಿ ದಲ್ಲಾಳಿಗಳ ವಿರುದ್ಧ ಕ್ರಮಕೈಗೊಂಡು ಅರ್ಹ ರೈತರಿಗೆ ನ್ಯಾಯ ದೊರಕಿಸಲು ಈ ಮೂಲಕ ಸಹಕರಿಸಬೇಕೆಂದರು.
ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮ ಸೇರಿದಂತೆ ಅನೇಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….