ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ರಸ್ತೆಯಲ್ಲಿನ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಬುಧವಾರ ಸಂಜೆ ತುಪ್ಪದ ಅಭಿಷೇಕ ಮತ್ತು ಜೇನು ತುಪ್ಪದ ಅಭಿಷೇಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯದ ಧರ್ಮದರ್ಶಿ ಬಸವರಾಜ್ ಸ್ವಾಮಿ, ಅರ್ಚಕರಾದ ಲಕ್ಷ್ಮೀಪತಿ ಸ್ವಾಮಿ ಅವರ ನೇತೃತ್ವದಲ್ಲಿ ಅಭಿಷೇಕ ಕಾರ್ಯಕ್ರಮ ನಡೆಸಲಾಯಿತು.
400ಕ್ಕು ಹೆಚ್ಚು ಮಾಲಾಧಾರಿಗಳು ಸೇರಿದಂತೆ ಸುಮಾರು ಎರಡು ಸಾವಿರ ಭಕ್ತರು ಅಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ವಿದ್ಯುತ್ ಪೂರೈಕೆ ಕಡಿತ: ಅಭಿಷೇಕ ಕಾರ್ಯಕ್ರಮದ ವೇಳೆ ಸುಮಾರು 1ಗಂಟೆ 30ನಿಮಿಷಗಳ ಕಾಲ ವಿದ್ಯುತ್ ಪೂರೈಕೆ ಕಡಿತದಿಂದ ಭಕ್ತರಿಗೆ ತೊಂದರೆ ಉಂಟಾಗಿತ್ತು. ಪ್ರತಿ ಬಾರಿಯೂ ದೇವಲಾಯದಲ್ಲಿ ವಿಶೇಷ ಪೂಜೆಯ ಸಮಯದಲ್ಲಿ ವಿದ್ಯುತ್ ಪೂರೈಕೆ ಕಡಿತ ನಿಲ್ಲಿಸಲಾಗುತ್ತಿದೆ, ಬೇಕೆಂದೇ ಕಡಿತ ಮಾಡಲಾಗುತ್ತಿದೆ ಎಂಬ ಅನುಮಾನವಿದ್ದು ಹಿರಿಯ ಅಧಿಕಾರಿಗಳು ಗಮನ ಹರಿಸುವಂತೆ ಭಕ್ತರು ಒತ್ತಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….