ಬೆಂಗಳೂರು: ಕೋವಿಡ್ ಸೋಂಕಿನ ತೀವ್ರತೆ ನಡುವೆ ತೀವ್ರ ಚರ್ಚೆಗೆ ಕಾರಣವಾಗಿರುವ ಕಾಂಗ್ರೆಸ್ ಆಯೋಜಿಸಿರುವ ಮೇಕೆದಾಟು ಪಾದಯಾತ್ರೆ ಕುರಿತು ಪರ ವಿರೋಧದ ಮಾತಿನ ಸಮರ ತೀವ್ರಗೊಂಡಿದೆ.
ಪ್ರಾಣ ಹೋದರೂ ನಡಿಗೆ ನಿಲ್ಲಲ್ಲ, ಧೈರ್ಯ ಇದ್ದರೆ ಮುಟ್ಟಿನೋಡಲಿ ಎಂಬ ಡಿ.ಕೆ.ಶಿವಕುಮಾರ್ ಮಾತಿಗೆ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕೊಟ್ಟಿದ್ದಾರೆ.
ಈ ಕುರಿತು ಫೇಸ್‌ಬುಕ್ ಅಲ್ಲಿ ಬರೆದುಕೊಂಡಿರುವ ಅವರು, ಪ್ರಾಣ ಹೋದರೂ ನಡಿಗೆ ನಿಲ್ಲಲ್ಲ, ಧೈರ್ಯ ಇದ್ದರೆ ಮುಟ್ಟಿನೋಡಲಿ ಎಂಬ ಮಾತುಗಳ ಕೇಳಿ ವ್ಯಥೆ ಮತ್ತು ನಗೆ ಎರಡೂ ಬರುತ್ತಿದೆ.
ರಾಜಕೀಯ ಕ್ಷೇತ್ರದ ಇಂತಹ ದೊಡ್ಡ ನಾಯಕರು ಈ ಬೀದಿ ಜಗಳದ ಮಾತು ಆಡುವುದು ಒಳ್ಳೆಯದಲ್ಲ. ಸಮಾಜದ ಸ್ವಾಸ್ಥ್ಯ ಕ್ಕಿಂತ ಯಾರದೇ ಪ್ರತಿಷ್ಠೆ ಮಿಗಿಲಾಗಬಾರದು. ಪ್ರತಿಯೊಬ್ಬರ ಪ್ರಾಣವೂ ಮುಖ್ಯವೇ!
ಇಂದಿಗೂ 1930ರ ಮಹಾತ್ಮ ಗಾಂಧಿ ಯವರ “ದಂಡಿ ಉಪ್ಪಿನ ಸತ್ಯಾಗ್ರಹದ ಪಾದಯಾತ್ರೆ” ಸಮಾಜದ ಸ್ಮೃತಿ ಯಲ್ಲಿ ಉಳಿದಿರುವುದು ಏಕೆಂದರೆ, ಆ ಹೋರಾಟದಲ್ಲಿದ್ದ ಪಾವಿತ್ರ್ಯತೆ, ಆ ಮಹಾನ್ ವ್ಯಕ್ತಿಯಲ್ಲಿದ್ದ ಪ್ರಾಮಾಣಿಕತೆ ಕಾರಣ ಎಂದಿರುವ ಸುರೇಶ್ ಕುಮಾರ್.
ಪ್ರಾಣ ಹೋದ ಮೇಲೆ ನಡಿಗೆ ಹೇಗೆಸಾಧ್ಯ?” ಎಂದು ಯಾರಾದರೂ ಕೇಳಿದರೆ…! ಎಂದು ಕಿಚಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….