ನವದೆಹಲಿ: ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನುಭಾರತದ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.
ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ದಿನಾಂಕಗಳನ್ನು ಪ್ರಕಟಿಸಿದರು.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಉತ್ತರ ಪ್ರದೇಶದಲ್ಲಿ ಫೆ10 ರಂದು ಮೊದಲ ಹಂತದ ಮತದಾನ ನಡೆಯಲಿದೆ. 10 ಮಾರ್ಚ್ ಗೆ ಪಂಚ ರಾಜ್ಯದ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ.
ಮೂರನೇ ಹಂತದ ಚುನಾವಣೆ ಯುಪಿ ಯಲ್ಲಿ ಫೆ.20 ರಂದು ನಡೆಯಲಿದೆ. 23 ನಾಲ್ಕನೇ ಹಂತದಲ್ಲಿ ಮಣಿಪುರದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಯಾವುದೇ ರೋಡ್ ಶೋ,ಪಾದಯಾತ್ರೆ, ಸೈಕಲ್, ಬೈಕ್ ಮೆರವಣಿಗೆ ಅವಕಾಶವಿಲ್ಲ. 15 ಜನವರಿಯ ವರೆಗೆ ಮಾತ್ರ ಸಾರ್ವಜನಿಕ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ಡಿಜಿಟಲ್ ಪ್ರಚಾರಕ್ಕೆ ಒತ್ತು ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ. 5 ಜನರಿಗೆ ಮಾತ್ರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ಆನ್ಲೈನ್ ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ , ಕೋವಿಡ್ ಹಿನ್ನಲೆಯಲ್ಲಿ ಆನ್ಲೈನ್ ನಲ್ಲಿ ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕ್ರಿಮಿನಲ್ ಕೇಸ್ ಗಳಿದ್ದರೆ ಸಾರ್ವಜನಿಕ ಪ್ರಕಟಣೆ ಮಾಡಲೇ ಬೇಕು, ಕಾರಣಗಳನ್ನು ಕೊಟ್ಟು ಪ್ರಕಟಿಸಬೇಕು. ಪಕ್ಷಗಳೂ ಕ್ರಿಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಯ ಬಗ್ಗೆ ವೆಬ್ ಸೈಟ್ ಮುಖಪುಟಗಳಲ್ಲಿ ಘೋಷಿಸಬೇಕು.
ಬೂತ್ ನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಮಾಧ್ಯಮಗಳು ಯಾವಾಗಲೂ ಆಯೋಗಕ್ಕೆ ಸಹಕಾರಿಯಾಗಿದ್ದು, ಮಾಧ್ಯಮಗಳು ನಮ್ಮ ಸ್ನೇಹಿತರು ಎಂದರು. ಅದೇ ರೀತಿ ಸಾಮಾಜಿಕ ತಾಣಗಳ ಬೆಂಬಲ ಅಗತ್ಯವಾಗಿದೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….