ದೊಡ್ಡಬಳ್ಳಾಪುರ: ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ದಿಢೀರ್ ಬೆಳವಣಿಗೆಯಲ್ಲಿ ಇಂದು ಸಂಜೆ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದರು.
ನಗರದ ಪ್ರವಾಸಿ ಮಂದಿರಕ್ಕೆ ಬಂದ ಋಷಿಕುಮಾರ ಸ್ವಾಮೀಜಿ ಅವರನ್ನು ಕಾಳಿ ಮಠದ ಭಕ್ತರಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮಕೃಷ್ಣ (ರಾಂ ಕಿಟ್ಟಿ) ಸ್ವಾಗತಿಸಿ, ಸತ್ಕರಿಸಿದರು.
ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆದು ದೇವಾಲಯ ಮರು ನಿರ್ಮಿಸಬೇಕೆಂದು ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿ, ಬುಧವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಋಷಿಕುಮಾರ ಸ್ವಾಮೀಜಿ ಅವರು ತಮ್ಮ ಹೇಳಿಕೆಗೆ ಬದ್ದವಾಗಿದ್ದು, ಬಾಬರಿ ಮಸೀದಿ ರೀತಿಯಲ್ಲಿ ಹಿಂದು ದೇವಾಲಯವ ಮಸೀದಿ ಮಾಡಿರುವುದನ್ನ ಕಾನೂನಾತ್ಮಕವಾಗಿ ಒಡೆದು, ಮರಳಿ ದೇವಾಲಯವನ್ನು ಪುನರ್ ಸ್ಥಾಪನೆ ಮಾಡಬೇಕೆಂಬ ಹೇಳಿಕೆ ನನ್ನದಾಗಿದೆ. ಆದರೆ ವಿಪರ್ಯಾಸ ಅನ್ಯ ಕೋಮಿನವರ ಪ್ರಚೋದಾತ್ಮಕ ಹೇಳಿಕೆ ನೀಡಿದರೆ ದೊಡ್ಡದಾಗಲ್ಲ. ಹಿಂದುಗಳು ಧರ್ಮದ ಪರವಾದ ಹೇಳಿಕೆ ನೀಡಿದರೆ ಮಾತ್ರ ವಿವಾದಾತ್ಮಕ ಹೇಳಿಕೆಯಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ದೇಶದ ಕಾನೂನಿನ ಮೇಲೆ ಗೌರವವಿದ್ದು ನ್ಯಾಯಾಲಯ ನನ್ನ ಹೇಳಿಕೆಗೆ ಮನ್ನಣೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮೋದಿ ಬಾಯ್ಸ್ ನರೇಂದ್ರ. ಜೋಗಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ರಂಗಪ್ಪ, ದೊಡ್ಡತುಮಕೂರು ಆನಂದ್, ಆನಂದ್ ಪೀಟ್ರಿ ಮತ್ತಿತರರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….