ದೊಡ್ಡಬಳ್ಳಾಪುರ: ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ಅಭಯ ಆಂಜನೇಯ ಸ್ವಾಮಿ ಹಾಗೂ ಗ್ರಾಮದೇವತೆ ಮಹೇಶ್ವರಮ್ಮ ದೇವಿಯ ಮಂಡಲ ಪೂಜೆ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಪ್ರಧಾನ ಆಗಮಿಕರಾದ ಆನಂದ ಆಳ್ವಾರ್ ಈ ಸಂದರ್ಭದಲ್ಲಿ ಮಾತನಾಡಿ, ಭಕ್ತಿ ಹಾಗೂ ಧ್ಯಾನದಿಂದ ಮನಸ್ಸು ಹೃದಯ ಶುದ್ಧವಾಗುತ್ತದೆ. ಮನಸ್ಸೇ ಭಕ್ತಿಯಾಗಿದೆ ಅಂತಃಕರಣದಿಂದ ಮಾಡಿದ ಭಕ್ತಿಯಿಂದ ಆಧ್ಯಾತ್ಮಿಕತೆಯ ಆನಂದದ ಅನುಭೂತಿ ಆಗುತ್ತದೆ. ಚಂಚಲತೆಯಿಂದ ವಿಕೃತಿಗೆ ಒಳಗಾಗುವ ಯುವಕರ ಮನಸ್ಥಿತಿಯನ್ನು ಆಧ್ಯಾತ್ಮಿಕತೆಯ ಅರಿವಿನ ಕಡೆಗೆ ಒಯ್ಯಬೇಕು. ವಿವೇಕಾನಂದ ,ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳ ಓದಿನಿಂದ ನಾವು ವಿಕಾಸದತ್ತ ಸಾಗಬೇಕು ಎಂದು ಹೇಳಿದರು.
ಮಂಡಲ ಪೂಜ ಅಂಗವಾಗಿ ಹೋಮ ಹಾಗೂ ವಿಶೇಷ ಪೂಜಾ, ಸಾಂಪ್ರದಾಯಿಕ ಪೂಜೆ ವಿಧಿವಿಧಾನಗಳನ್ನು ಸರಳವಾಗಿ ನಡೆಸಲಾಯಿತು.
ಪ್ರಧಾನ ಅರ್ಚಕರಾದ ರಂಗಸ್ವಾಮಿ ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….