ದೊಡ್ಡಬಳ್ಳಾಪುರ: ತಾಲೂಕಿನ ಗಂಟಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಕೆ.ಎನ್.ಹನುಮಂತರಾಜು ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಜಿ.ಎನ್.ರಂಗಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಯ್ಯ ಅವರ ಪುತ್ರ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಎನ್.ಹನುಮಂತರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2020ರ ಜನವರಿಯಲ್ಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾಗಿ ಜಿ.ಎನ್.ರಂಗಪ್ಪ ಆಯ್ಕೆಯಾಗಿದ್ದರು.
ಪೂರ್ವ ನಿಗದಿತ ಒಪ್ಪಂದದಂತೆ ಜೆಡಿಎಸ್ ಬೆಂಬಲಿತರಾದ ಕೆ.ಎನ್.ಹನುಮಂತರಾಜು ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ಕೆ.ಎನ್.ಹನುಮಂತರಾಜು, ಗಂಟಿಗಾನಹಳ್ಳಿ ವಿಎಸ್‍ಎಸ್‍ಎನ್ ರೈತರಿಗೆ ಹಲವಾರು ರೀತಿಯ ಸೌಲಭ್ಯಗಳು, ಸಾಲ ಯೋಜನೆಗಳನ್ನು ನೀಡುತ್ತಿದೆ. ಹಿರಿಯ ನಾಯಕರು ಸ್ಥಾಪಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘವನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷರಾದ ಕೆ.ಎನ್.ಹನುಮಂತರಾಜು ಅವರನ್ನು, ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಲಿ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಎಸ್.ಎಲ್.ವೆಂಕಟೇಶ್(ಬಾಬು), ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಅಪ್ಪಯ್ಯಣ್ಣ, ನರಸಿಂಹಯ್ಯ, ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಎನ್.ರಂಗಪ್ಪ , ಪಿಎಲ್‍ಡಿ ಬ್ಯಾಂಕ್ ಉಪಾಧ್ಯಕ್ಷ ಮುನಿಕೃಷ್ಣಪ್ಪ, ನಿರ್ದೇಶಕ ಹನುಮಪ್ಪ, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ದೇವರಾಜ್, ಮುಖಂಡರಾದ ರಾಮಾಂಜಿನಪ್ಪ, ಜಗನ್ನಾಥಾಚಾರ್, ಶ್ರೀನಿವಾಸ್, ಸಂಘದ ಉಪಾಧ್ಯಕ್ಷ ಸಿ.ಕೆ.ದೇವರಾಜ್, ಚಿದಾನಂದ, ನಿರ್ದೇಶಕರಾದ ಬಿ.ಎನ್.ಶ್ರೀನಿವಾಸ ಮೂರ್ತಿ, ಮುನಿ ಆಂಜಿನಪ್ಪ, ಪಿ.ರಾಮಕೃಷ್ಣಪ್ಪ, ಬೀದಣ್ಣ,ಆರ್.ಮುನಿರಾಮಣ್ಣ, ಯಶೋಧಮ್ಮ, ಎಂ.ಶ್ವೇತ, ವೆಂಕಟರಮಣಪ್ಪ ಅಭಿನಂದಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….