ದೊಡ್ಡಬಳ್ಳಾಪುರ: ಕರೊನಾ ಸೋಂಕಿತರ ಮನೋಬಲ ಹೆಚ್ಚಿಸಲು ನಗರದ ಸಾರ್ವಜನಿಕ ಆಸ್ಪತ್ರೆಯ ಸಮೀಪವಿರುವ ಮೇಕ್ ಶಿಪ್ಟ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ನಡೆಸಲಾಗುತ್ತಿದೆ.
ಸೋಂಕಿತರನ್ನ 2 ಬ್ಯಾಚ್‌ಗಳನ್ನಾಗಿ ವಿಂಗಡಿಸಿ ನಿತ್ಯ ಯೋಗಾಭ್ಯಾಸ ಮಾಡಿಸಲಾಗುತ್ತಿದೆ.
ಸೋಂಕಿತರು ಕರೊನಾದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತಾರೆ. ಹೀಗಾಗಿ, ಯೋಗ ಮಾಡುವುದು ಅವರ ಮನೋಸ್ಥೈರ್ಯ ಹಾಗೂ ಉತ್ಸಾಹ ಹೆಚ್ಚಿಸಲು ಸಹಕಾರಿಯಾಗುತ್ತೆ ಎನ್ನುವ ಕಾರಣಕ್ಕೆ ಪ್ರತಿ ನಿತ್ಯ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಯೋಗಭ್ಯಾಸ ಮಾಡಿಸಲಾಗುತ್ತಿದೆ.
ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಲು ಸೆಂಟರ್‌ನಲ್ಲಿ ಯೋಗಾ ಶಿಕ್ಷಕಿ ರಜನಿ ಸೂರ್ಯ ನಮಸ್ಕಾರ, ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಓಂಕಾರ ಮಾಡಿಸುವ ಜತೆಗೆ ಸೋಂಕಿತರಲ್ಲಿ ಆತ್ಮಬಲ, ಮನೋಸ್ಥೈರ್ಯ, ದೈಹಿಕ ಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ.
ಪ್ರಸ್ತುತ 23 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರಾದ ಡಾ.ಚನ್ನಕೇಶವ, ಡಾ.ಅರಣ್, ದಾದಿಯರಾದ ಪ್ರಭಾ, ಪ್ರೇಮಾ ಡಾಕ್ಟರ್ಸ್ ಫಾರ್ಯೂ ಸಂಸ್ಥೆಯ ಡಾ.ಕೀರ್ತನ ಹಾಗೂ ಸಿಬ್ಬಂದಿ ಸೋಂಕಿತರ ನಿಗಾವಹಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….