ಚಿಕ್ಕಬಳ್ಳಾಪುರ, (ಡಿ.12): ಸತತ ಮಳೆಗೆ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಭೂ ಕುಸಿತವಾಗಿದ್ದು, ಆತಂಕ ಸೃಷ್ಟಿಸಿದೆ.

ತಾಲೂಕಿನ ಸುಲ್ತಾನಪೇಟೆ ಗ್ರಾಮದ ಕಡೆಯಲ್ಲಿ ಬೆಟ್ಟ ಕುಸಿದಿದು ಮಣ್ಣು ಹರಿದು ಬಂದಿದ್ದು, ಗುಡ್ಡ ಕುಸಿತದಿಂದ ಕಲ್ಲು ಬಂಡೆಗಳು ಉರುಳಿ ಗ್ರಾಮಕ್ಕೆ ಬರುವ ಆತಂಕ ಎದುರಾಗಿದೆ.

ಬೆಟ್ಟದಿಂದ ಈಗಲೂ ಮಣ್ಣು ಕುಸಿಯುತ್ತಿದ್ದು, ಅಪಾಯಕ್ಕೆ ಅಹ್ವಾನ ನೀಡುವಂತಿದೆ ಎಂದು ಪ್ರತ್ಯಕ್ಷದರ್ಶಿ ಯಶವಂತ್ ಆರಾಧ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 25 ಮತ್ತು ಸೆ.06 ರಂದು ಸಹ ಗುಡ್ಡ ಕುಸಿತ ಆಗಿತ್ತು. ಅಲ್ಲದೆ ರಸ್ತೆ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಆಗಿತ್ತು.
ಗಣಿಗಾರಿಕೆಯಿಂದ ನಂದಿಗಿರಿಧಾಮಕ್ಕೆ ಆತಂಕ: ನಂದಿಗಿರಿಧಾಮದ ಸುತ್ತಮುತ್ತಲೂ ಎತ್ತ ನೋಡಿದ್ರೂ ಪಂಚಗಿರಿಗಳ ಸಾಲು ಇದೆ. ಇದೆ ಪಂಚಗಿರಿಗಳ ಸಾಲಿನಲ್ಲಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಗಳು ಕಲ್ಲು ಕ್ವರಿ ಕ್ರಷರ್ ಗಣಿಗಾರಿಕೆಗೆ ಅನುಮತಿ ನೀಡಿವೆ. ಇದರಿಂದ ನಂದಿಗಿರಿಧಾಮದ ಸುತ್ತ ಎತ್ತ ನೋಡಿದ್ರೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಪ್ರತಿದಿನ ಸಂಜೆಯಾದರೆ ಸಾಕು ಕಲ್ಲು ಗಣಿಯ ಬ್ಲಾಸ್ಟಿಂಗ್ ನಡೆಯುತ್ತಿದೆ. ಇದ್ರಿಂದ ಗಿರಿಧಾಮದ ಮೇಲೆ ಇರುವ ಅತಿಥಿ ಗೃಹಗಳು ಗಡ ಗಡ ನಡುಗುತ್ತಿವೆ, ಇದರಿಂದ ಗಿರಿಧಾಮಕ್ಕೆ ಕಲ್ಲು ಗಣಿಯ ಆತಂಕ ಎದುರಾಗಿದೆ.
ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಬೆಟ್ಟ ಕುಸಿದಿತ್ತು: ಕಳೆದ ವರ್ಷ ಅಗಷ್ಟು 25ರಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಹಾಗೂ ಬ್ರಹ್ಮಗಿರಿಯ ಮದ್ಯೆದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಟ್ಟ ಕುಸಿದು ದೊಡ್ಡ ಅವಾಂತರವೆ ಸೃಷ್ಟಿಯಾಗಿತ್ತು. ಆಗ ದೊಡ್ಡ ದೊಡ್ಡ ಕಲ್ಲು ಬಂಡೆಗಳು ರಸ್ತೆಗೆ ಉರುಳಿ ಬಿದ್ದು ರಸ್ತೆ ಹಾಗೂ ಪಿ.ಡ್ಲೂ.ಡಿ ರಸ್ತೆಯೆ ಕೊಚ್ಚಿ ಹೋಗಿತ್ತು, ಇದರಿಂದ ಆರೇಳು ತಿಂಗಳು ನಂದಿಗಿರಿಧಾಮ ಬಂದ್ ಸಹ ಆಗಿತ್ತು.
ಆಗ ದೊಡ್ಡ ದೊಡ್ಡ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲ ಗಣಿಗಾರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು. ಇದರಿಂದ ಸರ್ಕರ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಆಗ ರಸ್ತೆಯನ್ನು ಸರಿಪಡಿಸಿ ನೂತನ ಮಾದರಿಯಲ್ಲಿ ಮೋರಿ ಸಹ ನಿರ್ಮಾಣ ಮಾಡಿದೆ.
ಮತ್ತೆ ಮತ್ತೆ ಗಿರಿಧಾಮಕ್ಕೆ ಆತಂಕ: ಕಳೆದ ವರ್ಷದ ಬೆಟ್ಟ ಕುಸಿತ ಪ್ರಕರಣದ ನಂತರ ಮೊನ್ನೆ ಮೊನ್ನೆ ವೀರಭದ್ರಸ್ವಾಮಿ ದೇವಾಲಯದ ಬಳಿ ಬೆಟ್ಟ ಕುಸಿದು ಇನ್ನಿಲ್ಲದ ಆತಂಕ ಸೃಷ್ಟಿ ಮಾಡಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
