
ದೊಡ್ಡಬಳ್ಳಾಪುರ, (ಡಿ.12): ಕಳೆದೆರಡು ದಿನಗಳಿಂದ ಜನ ಜೀವನ ಅಸ್ತವ್ಯಸ್ತಗೊಳಿಸಿದ್ದ ಮಾಂಡೌಸ್ ಚಂಡಮಾರುತದ ಪರಿಣಾಮ ತಾಲೂಕಿನಲ್ಲಿ 54.02 ಮಿಮೀ ಮಳೆಯಾಗಿದೆ.

ಈ ಕುರಿತಂತೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ಹರಿತಲೇಖನಿಗೆ ಮಾಹಿತಿ ನೀಡಿದ್ದು, ತಾಲೂಕಿನಲ್ಲಿ ಜನವರಿಯಿಂದ ಡಿಸೆಂಬರ್ 11ರ ವರೆಗಿನ ಮಾಹಿತಿಯಂತೆ 757 ಮಿಮೀ ವಾಡಿಕೆ ಮಳೆಯಿದ್ದು, ಇಲ್ಲಿಯವರೆಗೂ 1557.08 ಮಿಮೀ ಮಳೆಯಾಗಿದೆ.

ಉಳಿದಂತೆ ಡಿಸೆಂಬರ್ 10 ಮತ್ತು 11ರಂದು ತಾಲೂಕಿನ ಕಸಬ ಹೋಬಳಿಯಲ್ಲಿ 50 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 53 ಮಿಮೀ, ಮಧುರೆ ಹೋಬಳಿಯಲ್ಲಿ 46.06 ಮಿಮೀ, ಸಾಸಲು ಹೋಬಳಿಯಲ್ಲಿ 52 ಮಿಮೀ, ತೂಬಗೆರೆ ಹೋಬಳಿಯಲ್ಲಿ 65 ಮಿಮೀ ಸೇರಿ ಒಟ್ಟು 54.02 ಮಿಮೀ ಮಳೆಯಾಗಿದೆ.
ಮಾಂಡೌಸ್ ಅಬ್ಬರಕ್ಕೆ ನೆಲ ಕಚ್ಚಿದ ರಾಗಿ: ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ ರಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆ ಕೊಯ್ಲಿಗೆ ಅಡ್ಡಿಪಡಿಸಿದೆ. ಹೀಗೆ ಇದು ಮುಂದುವರೆದರೆ ಬೆಳೆನಷ್ಟ ಆಗುವ ಭೀತಿಯಲ್ಲಿದ್ದಾರೆ ರೈತರು.
ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ರಾಗಿ ತೆನೆಯಲ್ಲಿ ತೇವಾಂಶ ಹೆಚ್ಚಾಗಿ ಮೊಳಕೆ ಹೊಡೆಯುತ್ತಿದೆ. ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿ ರಾಗಿ ಬಿತ್ತನೆ ಮಾಡಿದ್ದ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
