ದೊಡ್ಡಬಳ್ಳಾಪುರ, (ಡಿ.12): ಜನವರಿ 18ರಿಂದ 23ರ ವರೆಗೆ ನಡೆಯಲಿರುವ ಶ್ರೀ ಕ್ಷೇತ್ರ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ, ಪ್ರಸಾರ ರಥ ಸೋಮವಾರ ದೊಡ್ಡಬಳ್ಳಾಪುರಕ್ಕೆ ಆಗಮಿಸಿತ್ತು.

ನಗರದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾದಲ್ಲಿನ ಶ್ರೀ ಬಸವದೇವರ ಮುಂಭಾಗದಲ್ಲಿ ರಥಕ್ಕೆ ಸ್ವಾಗತ ಕೋರಿದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿ, ಬೀಳ್ಕೊಟ್ಟರು.

ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ, ಶ್ರೀ ನಿಶ್ಚಲನಿರಂಜನ ದೇಶೀಕೇಂದ್ರ ಮಹಾಸ್ವಾಮಿಜಿ, ವೀರೈಶವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಾದ ಸಿದ್ದರಾಮಣ್ಣ, ಮುನಿರಾಜು, ಲಿಂಗಪ್ಪ, ಬಸವರಾಜು, ಲತಾ ಆರಾಧ್ಯ, ಶಶಿಕಲಾ ನಾಗರಾಜು, ಲೋಕೇಶ್ ನಾಗಸಂದ್ರ, ಚರಣ್, ಸುಜಯ್, ಮಾದೇಶ್, ಭರತ್, ಮುಖಂಡರಾದ ರಮೇಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
