ಬೆಂಗಳೂರು, (ಸೆ.13): ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದ ಬಹುತೇಕ ಕಡೆಗಳಲ್ಲಿ ಬರ ಛಾಯೆ ಮೂಡಿದೆ. 100ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ಸರ್ಕಾರ ಮುಂದಾಗಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್ ವೊಂದನ್ನು ಮಾಡಿ ಟೀಕಿಸಿದೆ. ಸಿದ್ದರಾಮಯ್ಯಯವರ ಭಾವಚಿತ್ರದ ಮೇಲೆ ಬರದ ಗೆರೆಗಳನ್ನು ಚಿತ್ರಿಸಿ ಬರ ಗ್ಯಾರಂಟಿ ಸಿಎಂ ಎಂದು ಬಿಜೆಪಿ ಲೇವಡಿ ಮಾಡಿದೆ.
ಕಾಂಗ್ರೆಸ್ ಬಂದಿದೆ ಬರಗಾಲ ತಂದಿದೆ ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಅಲ್ಲದೇ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ರಾಜ್ಯದಲ್ಲಿ ಬರ ಗ್ಯಾರಂಟಿ, ಕಾಂಗ್ರೆಸ್ ಆಡಳಿತಾವಧಿಯ ಬಹುಪಾಲು ಅವಧಿಯಲ್ಲಿ ರಾಜ್ಯ ಬರ ಎದುರಿಸುವಂತಾಗಿತ್ತು ಎಂದಿದೆ.
ಮುಂದುವರೆದು ಈ ಬಾರೀ ರಾಜ್ಯದಲ್ಲಿ ಅತಿ ಹೆಚ್ಚು ಕಡೆಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಅಣಕಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….