ಬ್ಯಾಂಕ್ ಉದ್ಯೋಗಿಗೆ 16 ಲಕ್ಷ ರೂ. ವಂಚನೆ

ಚಿಕ್ಕಬಳ್ಳಾಪುರ, (ಅ.12): ಬ್ಯಾಂಕ್‌ ಉದ್ಯೋಗಿಯೊಬ್ಬ ಸೈಬರ್ ವಂಚಕರ ಜಾಲಕ್ಕೆ ಬಿದ್ದು 16,27,849 ರೂಪಾಯಿಗಳನ್ನು ಕಳೆದುಕೊಂಡ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಚನ್ನಭೈರೇನಹಳ್ಳಿ ಗ್ರಾಮದ ಕೋಟಕ್ ಮಹೇಂದ್ರ ಬ್ಯಾಂಕ್‌ನ ಸಿ.ವಿ.ಶ್ರೀನಿವಾಸ್ ಮೋಸ ಹೋದ ಬ್ಯಾಂಕ್ ಉದ್ಯೋಗಿ.

ಮೊಬೈಲ್‌ನಲ್ಲಿ ವಿವಿಧ ರ್ಏಲೈನ್‌ಗಳಿಗೆ ಸ್ಯಾಟಿಸ್ಟ್ ಆಗಿರುವ ಬಗ್ಗೆ ರೇಟಿಂಗ್ಸ್ ನೀಡಿದರೆ ಹಣ ನೀಡುವುದಾಗಿ ಆಮಿಷವೊಡ್ಡಲಾಗಿದೆ. ಅದನ್ನು ನಂಬಿದ ಬ್ಯಾಂಕ್‌ ಉದ್ಯೋಗಿ ಶ್ರೀನಿವಾಸ್‌ ಈ-ಸ್ಟ್‌ ಆಪ್ ಇನ್ಸ್‌ಸ್ಟಾಲ್ ಮಾಡಿಕೊಂಡು ಅವರು ಹೇಳಿದಂತೆ 16,27,849 ರೂಪಾಯಿಗಳನ್ನು ಖದೀಮನ ಆ್ಯಪ್ ಖಾತೆಗೆ ಹಾಕಿದ್ದಾನೆ. 

ಕೊನೆಗೆ ಅದು ಸೈಬರ್ ವಂಚನೆ ಎಂದು ಗೊತ್ತಾಗುತ್ತಿದ್ದಂತೆ ಸಿಇಎನ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….