ಹರಿತಲೇಖನಿ ದಿನಕ್ಕೊಂದು ಕಥೆ: ರೈತ ಮತ್ತು ದೇವರು..!

ಅತೀ ವೃಷ್ಟಿ ಹಾಗೂ ಅನಾವೃಷ್ಟಿ ಗಳಿಂದ ನೊಂದ ರೈತನೊಬ್ಬನಿಗೆ,ಭಗವಂತನ ಮೇಲೆ ತುಂಬಾ ಬೇಸರವಾಯ್ತ. ಭಗವಂತ ಅವನ ಎದುರಿಗೆ ಬಂದು ,ನಾನೇನು ಮಾಡಬೇಕು ಹೇಳು ಎಂದ.

ವ್ಯವಸಾಯದ ಬಗ್ಗೆ ನೀನಗೇನು ಗೊತ್ತು, ಭಗವಂತ, ನಮ್ಮಂಥ ರೈತರನ್ನು ಕೇಳಿ ನೀನು, ಮಳೆ ಬಿಸಿಲನ್ನು ನೀಡಬೇಕು, ಅಕಾಲಿಕ ಮಳೆ, ಬರಗಾಲದಿಂದ ಕಷ್ಟ ಅನುಭವಿಸುವವರು ನಾವೇ ತಾನೇ ಎಂದ ರೈತ.

ಭಗವಂತ ನಗುತ್ತಾ, ಈ ಒಂದು ವರ್ಷ ನೀನು ಹೇಳಿದ ರೀತಿಯಲ್ಲೇ ಮಳೆ ಬಿಸಿಲನ್ನು  ನೀಡುತ್ತೇನೆ, ನಿನಗೆ ಒಂದು ವರ್ಷ ಅವಕಾಶವಿದೆ ಅದನ್ನು ಉಪಯೋಗಿಸಿಕೊ ಎಂದು ಹೇಳಿ ಹೋದ.

ರೈತನಿಗೆ ತುಂಬಾ ಖುಷಿಯಾಯಿತು, ರೈತ ಯಾವಾಗ ಬಿಸಿಲು ಬಯಸಿದನೋ ಆಗ ಬಿಸಿಲು ಬಂತು, ಮಳೆ ಬಯಸಿದಾಗ ಮಳೆ ಬಂತು, ಸ್ವಲ್ಪ ಕೊಡಾ ಹೆಚ್ಚು ಕಡಿಮೆ ಆಗಲಿಲ್ಲ. ಬತ್ತದ ಪೈರುಗಳೆಲ್ಲಾ ಎತ್ತರವಾಗಿ ಬೆಳೆದು ನಿಂತವು, ನೋಡಲು ತುಂಬಾ ಸೊಗಸಾಗಿ ಕಾಣುತ್ತಿದ್ದವು, ರೈತನಿಗೆ ತುಂಬಾ ಸಂತೋಷವಾಗಿತ್ತು.

ರೈತ ಅಂದುಕೊಂಡ ಪರಮಾತ್ಮನಿಗೆ ಈಗ ಗೊತ್ತಾಗುತ್ತದೆ, ಅದೆಷ್ಟು ಸಮಯದಿಂದ ವ್ಯರ್ಥವಾಗಿ ರೈತರನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತಿದ್ದ, ಯಾರಾದರೂ ಒಬ್ಬ ರೈತನನ್ನು ಕೇಳಿದ್ದರೆ, ಈ ರೀತಿಯ ಸಮಸ್ಯೆ ಯೇ ಆಗುತ್ತಿರಲಿಲ್ಲ, ಈಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ, ಅಂದುಕೊಂಡ.

ಭತ್ತದ ಫಸಲೇನೊ ಚೆನ್ನಾಗಿ ಬೆಳೆದಿದ್ದವು, ನೋಡಲು ತುಂಬಾ ಚೆನ್ನಾಗಿದ್ದವು. ಆದರೆ ಅದರಲ್ಲಿ ಕಾಳುಗಳು ಇರದೆ ಬರೀ ಜೊಳ್ಳಾಗಿದ್ದವು, ರೈತ ಎದೆ ಬಡಿದು ಕೊಳ್ಳುತ್ತಾ ಹೇ, ಪರಮಾತ್ಮ, ಇದೇಕೆ  ಹೀಗಾಯಿತು ಎಂದು ಕಿರುಚಿದ.

ಭಗವಂತ ಬಂದು ಹೇಳಿದ, ನೀನು ಬಿರುಗಾಳಿ, ಮಿಂಚು, ಗುಡುಗು, ಸಿಡಿಲು ಬರಲು ಬಿಡಲಿಲ್ಲ, ಅವು ಎಲ್ಲಾ ಒಟ್ಟು ಗೂಡಿ  ಘರ್ಷಣೆ ಆಗಲು ಬಿಡಲಿಲ್ಲ, ಫಸಲು ಚೆನ್ನಾಗೇನೋ ಬೆಳೆದವು, ಆದರೆ ಅವು ಸತ್ವಯುತವಾಗಲಿಲ್ಲ, ಬಿರುಗಾಳಿ  ಗುಡುಗು, ಮಿಂಚು, ಇವುಗಳ ಘರ್ಷಣೆಯಿಂದ  ಸಸ್ಯಗಳು ತಮ್ಮ ಬಲದಿಂದ ಸೆಟೆದು  ನಿಲ್ಲುತ್ತವೆ. ಹೇಗಾದರೂ ಎದ್ದು ನಿಲ್ಲಬೇಕೆಂಬ  ಮನೋಭಾವ ಅವುಗಳಲ್ಲಿ ಬಂದು ಅವು ಸತ್ವಯುತವಾಗುತ್ತವೆ. ಹಾಗೇ ಗಟ್ಟಿಯಾಗಿ ಕಾಳುಕಟ್ಟುತ್ತವೆ, ಸಂಘರ್ಷದಲ್ಲೇ ಶಕ್ತಿ, ಸುಪ್ತವಾಗಿರುವುದು ಎಂದು ರೈತನಿಗೆ ಭಗವಂತ ತಿಳಿ ಹೇಳಿದ.

ನೋವಿನಿಂದಲೇ ಅಲ್ಲವೇ, ಎಲ್ಲಾ ಹೊಸತುಗಳ ಹುಟ್ಟು. ಕಹಿಯ ಕಲ್ಮಶವೆಲ್ಲಾ ಉರಿದು ಸುಟ್ಟಾಗಲೇ ಹೊಸರೂಪ‌, ಹೊಸತೇಜಸ್ಸು ಉಂಟಾಗುವುದು. ಹಾಗೆಯೇ, ತಾಯಿಗೆ ಪ್ರಸವ ಯಾತನೆ ಇಲ್ಲದೇ ಇದ್ದರೆ, ಮಗುವಿನ ಜನನವಾಗುವುದಿಲ್ಲ. ಆದ್ದರಿಂದಲೇ ತಾಯಿಗೆ ಮಗುವಿನ ಬಗ್ಗೆ ಅಪಾರವಾದ  ಪ್ರೀತಿಯಿರುತ್ತದೆ. ಎಲ್ಲವೂ ಸುಲಭವಾಗಿ ದೊರೆಯುವಂತಿದ್ದರೆ, ನಮಗೆ ಅದರಲ್ಲಿ ಯಾವ ಆನಂದವೂ ಇರುವುದಿಲ್ಲ, ಕಷ್ಟ ಅನುಭವಿಸಿದಾಗಲೇ, ಸುಖದ ಆನಂದವಿರುವುದು.
   

ಕೃಪೆ:
ಸುವರ್ಣಾ ಮೂರ್ತಿ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಆ.31 ರಂದು “ಧರ್ಮಸ್ಥಳ ಸತ್ಯ ಯಾತ್ರೆ: ಜೆಡಿಎಸ್ ಕಾರ್ಯಕರ್ತರಿಗೆ ಬಿ.ಮುನೇಗೌಡ ಕರೆ

ಆ.31 ರಂದು “ಧರ್ಮಸ್ಥಳ ಸತ್ಯ ಯಾತ್ರೆ: ಜೆಡಿಎಸ್ ಕಾರ್ಯಕರ್ತರಿಗೆ ಬಿ.ಮುನೇಗೌಡ ಕರೆ

"ಧರ್ಮಸ್ಥಳ ಸತ್ಯ ಯಾತ್ರೆಗೆ" (Dharmasthala Satya Yatre) ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ (JDS) ಅಧ್ಯಕ್ಷ ಬಿ.ಮುನೇಗೌಡ ಕರೆ ನೀಡಿದ್ದಾರೆ.

[ccc_my_favorite_select_button post_id="113258"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರದ ಮೊತ್ತ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರದ ಮೊತ್ತ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಒಲಂಪಿಕ್ಸ್ , ಏಷ್ಯನ್ ಗೇಮ್ಸ್, ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಗೆದ್ದವರಿಗೆ 3 ಹಾಗೂ ಕಂಚು ಗೆದ್ದವರಿಗೆ 2 ಕೋಟಿ ರೂ.ಗಳ ಬಹುಮಾನ: Cmsiddaramaiah

[ccc_my_favorite_select_button post_id="113214"]
ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ದಿನ ತಪ್ಪಿದ ಅನಾಹುತ.. ಟೋಲ್ ಸಂಸ್ಥೆ ವಿರುದ್ಧ ಸಾರ್ವಜನಿಕರ ಆಕ್ರೋಶ!| Video ನೋಡಿ

ದೊಡ್ಡಬಳ್ಳಾಪುರ: ಗಣೇಶ ಚತುರ್ಥಿ ದಿನ ತಪ್ಪಿದ ಅನಾಹುತ.. ಟೋಲ್ ಸಂಸ್ಥೆ ವಿರುದ್ಧ ಸಾರ್ವಜನಿಕರ

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ಬದಿಯಲ್ಲಿನ ಚರಂಡಿ ನುಗ್ಗಿರುವ ಘಟನೆ ನಗರದ ಹೊರವಲಯದಲ್ಲಿನ Doddaballapura ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

[ccc_my_favorite_select_button post_id="113161"]
ದೊಡ್ಡಬಳ್ಳಾಪುರ: ಹಿಟ್ & ರನ್.. ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ಹಿಟ್ & ರನ್.. ವ್ಯಕ್ತಿ ಸಾವು..!

ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ (Hit & Run) ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ- ದಾಬಸ್‌ಪೇಟೆ ನಡುವಿನ

[ccc_my_favorite_select_button post_id="113236"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!