ರೈತರ ಕಷ್ಟ ತಿಳಿಯದ ಅಸಮರ್ಥ ವಿರೋಧಪಕ್ಷದ ನಾಯಕ ಆರ್.ಅಶೋಕ್; ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ

ಬೆಂಗಳೂರು, (ಜೂ.30): ಕರ್ನಾಟಕದ ಅತ್ಯಂತ ಅಸಮರ್ಥ ವಿಪಕ್ಷ ನಾಯಕ ಅಂತ ಯಾರಾದರೂ ಇದ್ದರೆ ಅದು ಆರ್.ಅಶೋಕ್ ಅವರು ಎಂದು ಚಿಕ್ಕಬಳ್ಳಾಪುರ  ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1962ರಲ್ಲಿ ನಮಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕರು ಅಂತ ಇರಲಿಲ್ಲ.‌ ಮೊದಲಿಗೆ ಆಯ್ಕೆಯಾದ ಶಿವಪ್ಪರ ಆದಿಯಾಗಿ ದೇವೇಗೌಡ ಅವರು, ಎಸ್.ಆರ್.ಬೊಮ್ಮಾಯಿ ಅವರು, ಬಂಗಾರಪ್ಪ ಅವರು, ಸಿದ್ದರಾಮಯ್ಯ ಅವರು ಇವೆರಲ್ಲರೂ ವಿರೋಧ ಪಕ್ಷದ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆದರೆ ಮೋಸ್ಟ್ಲೀ ಬಿಜೆಪಿಯವರಿಗೆ ಗತಿಯಿರಲಿಲ್ಲ ಅನಿಸುತ್ತೆ ಅದಕ್ಕೆ ಆರ್.ಅಶೋಕನ ಆಯ್ಕೆ ಮಾಡಿದ್ದಾರೆ.

 ಆರ್ ಅಶೋಕ್ ಅವರನ್ನು ಕೇಳೋಲ್ ಬಯಸುತ್ತೇನೆ  ನಮ್ಮ ಪಕ್ಷದ ಆಂತರಿಕ ವಿಚಾರ ನಾವು ಬಗೆಹರಿಸುತ್ತೇವೆ. ನಿಮಗ್ಯಾಕೆ ಸರ್ ಅಷ್ಟು ತೆವಲು? ನಮ್ಮ ಪಕ್ಷ ಆತಂಕರೀಕ ವಿಚಾರ ನಮ್ಮ ವರಿಷ್ಟರಿದ್ದಾರೆ, ನಮ್ಮ ನಾಯಕರಿದ್ದಾರೆ ನಾವ್ ಬಗೆ ಹರಿಸಿಕೋತೀವಿ.

ವಿರೋಧ ಪಕ್ಷದ ನಾಯಕರು ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ನೆನ್ನೆ ಎಲ್ಲೋ ಮಾತಾಡ್ಯಾರೆ ಹಾಲಿನ ದರ ಹೆಚ್ಚಿಸಿ ಅಂತ ಯಾರಾದರು ಅರ್ಜಿ ಕೊಟ್ಟಿದ್ರು ಅಂತ. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಅರ್ಜಿಗೆ ಕಾಯ್ತಾ ಕೂರಬೇಕಾ..? ಕೋಲಾರ ಚಿಕ್ಕಬಳ್ಳಾಪುರದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷಕ್ಕಿಂತ ಶೇ.15ರಷ್ಟು ಹೆಚ್ಚಾಗಿದೆ. ಹೀಗಾಗಿ, ಡೈರಿಗೆ ಹೆಚ್ಚಿಗೆ ಹಾಲು ತೆಗೆದುಕೊಂಡು ಬಂದ ರೈತರಿಗೆ ವಾಪಸ್ ತೆಗೆದುಕೊಂಡು ಹೋಗಿ ಅಂತ ಹೇಳಲು ಆಗಲ್ಲ. ಅದಕ್ಕೆ ಗ್ರಾಹಕರಿಗೆ 50ಎಂಎಲ್ ಜಾಸ್ತಿ ಕೊಟ್ಟು, ಅದಕ್ಕೆ ತಕ್ಕ ಹಣ ಪಡೆಯಲಾಗುತ್ತಿದೆ‌. ಅದರ ಲಾಜಿಕ್ ನೀವ್ ಗಮನಿಸಿಲ್ಲ ಕೋಲಾರ, ಚಿಕ್ಕಬಳ್ಳಾಪುರದ ರೈತರ ಕಷ್ಟ ನಿಮಗೆಲ್ ಅರ್ಥ ಆಗಬೇಕು ಆರ್ ಅಶೋಕ್​​ ಅವರೇ ರೈತರ ಸಮಸ್ಯೆ ಬಗ್ಗೆ ಆರ್ ಅಶೋಕ್ ಎಲ್ಲಿ ಧ್ವನಿ ಎತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಆರ್ ಅಶೋಕ್ ವೈಯಕ್ತಿಕ ಟೀಕೆಗೆ ಬರಬೇಡಿ. ನಿಮ್ಮ ಪಕ್ಷದ ಸಮಸ್ಯೆ ಬಗ್ಗೆ ಮಾತನಾಡಿ, ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಯಾವಾಗ ಕೋಪಿಸಿಕೊಂಡು ಎನ್​ಡಿಎ ಬಿಟ್ಟು ಹೋಗುತ್ತಾರೆ ಗೊತ್ತಿಲ್ಲ. ಮೊದಲು ಎನ್​ಡಿಎ ಸರ್ಕಾರವನ್ನು ಗಟ್ಟಿಯಾಗಿ ಇಟ್ಟುಕೊಳ್ಳಿ.

ವಿರೋಧ ಪಕ್ಷದ ನಾಯಕನಾಗಿ ಹೇಗೆ ಕೆಲಸ ಮಾಡಬೇಕು ಎಂಸು ಆರ್​ ಅಶೋಕ್​ ಅವರಿಗೆ ಗೊತ್ತಿಲ್ಲ ಅಂದ್ರೆ ಸಿದ್ದರಾಮಯ್ಯ ಅವರ ಬಳಿ ತರಬೇತಿ ತೆಗೆದುಕೊಳ್ಳಲಿ. ಬಳ್ಳಾರಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿದರು. ಅದು ಸಿದ್ದರಾಮಯ್ಯ ತಾಕತ್ತು. ಬಿಜೆಪಿಯವರು ಗಂಭೀರ ವಿಚಾರದ ಬಗ್ಗೆ ಮಾತಾಡಿದ್ದೇ ನಾನು ನೋಡಿಲ್ಲ ಎಂದು ತಿರುಗೇಟು​ ಕೊಟ್ಟರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!