ಕೃಷ್ಣನೂರಿನಲ್ಲಿ ಭಾರತೀಯ ಸಿಹಿ ಮನೆಯಿಂದ ತಿನ್ನುವ ಹಬ್ಬ ಶುರು..!

ಉಡುಪಿ, (ಆಗಸ್ಟ್.10): ನಾವು ಊಟ ಮಾಡುವುದು ಮುಖ್ಯವಲ್ಲ, ಊಟ ಮಾಡಿದ್ದನ್ನು ಜೀರ್ಣಿಸಿಕೊಳ್ಳುವುದು ಮುಖ್ಯ. ತಿನ್ನುವಿಕೆ ಅಜೀರ್ಣ ಆಗದ ರೀತಿಯಲ್ಲಿ ಇರಬೇಕು. ಹಿರಿಯರು ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ. ಭಾರತೀಯ ಸಿಹಿ ಮನೆ ಉಡುಪಿಯಲ್ಲಿ ಆರಂಭವಾಗಿದೆ. ತಿನ್ನುವ ಹಬ್ಬ ಶುರುವಾಗಿರುವುದು ಕೃಷ್ಣನೂರಿನಲ್ಲಿ ಸಂಭ್ರಕ್ಕೆ ಕಾರಣವಾಗಿದೆ ಎಂದು ಅದಮಾರು ಮಠದ  ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. 

ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್  31ನೇ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಸಿಹಿತಿಂಡಿ ಮಳಿಗೆ ಎಂಬ ಹೆಗ್ಗಳಿಕೆಗೆ ಇಂಡಿಯಾ ಸ್ವೀಟ್ ಹೌಸ್ ಮಳಿಗೆ ಪಾತ್ರ ಆಗಿದೆ. ಕೇವಲ ಮೂರು ವರ್ಷಗಳಲ್ಲಿ ಇಂಡಿಯಾ ಸ್ವೀಟ್ ಹೌಸ್ನ  31 ನೇ ಮಳಿಗೆ ಉದ್ಘಾಟನೆ ಆಗಿರುವುದು ಇದರ ಅಭಿವೃದ್ಧಿಗೆ ಸಾಕ್ಷಿ ಆಗಿದೆ. ಅಧಿಕೃತ ಭಾರತೀಯ ಸಿಹಿ ತಿಂಡಿಗಳು ಮತ್ತು ಖಾರಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಗೆ ಈ ಬೆಳವಣಿಗೆ ಸಾಕ್ಷಿ ಆಗಿದೆ ಎಂದರು.

ಆರೋಗ್ಯಕ ಹಾಗೂ ಅನಾರೋಗ್ಯಕ್ಕೆ ಆಹಾರ ಮುಖ್ಯ ಆಗಿರುತ್ತದೆ. ಅದರಂತೆ ಈ ಬದ್ಧತೆಯಲ್ಲಿ ಇಂಡಿಯಾ ಸ್ವೀಟ್ ಹೌಸ್ ಗ್ರಾಹಕರಿಗೆ ಜೀರ್ಣ ಆಗುವಂತಹ ಖಾದ್ಯಗಳನ್ನು ತಯಾರು ಮಾಡುವ ಮೂಲಕ 31ನೇ ಮಳಿಗೆ ಆರಂಭಿಸುತ್ತಿದ್ದಾರೆ. ಸಿಹಿ ಪ್ರಿಯ ಕೃಷ್ಣ, ಹಾಗಾಗೀ ಉಡುಪಿಯಲ್ಲಿ ಆರಂಭ ಆಗಿರುವ ಭಾರತೀಯ ಸಿಹಿ ಮನೆ ಮತ್ತಷ್ಟು ಸಂಸ್ಥೆಗಳನ್ನು ದೇಶದಾದ್ಯಂತ ವಿಸ್ತರಣೆ ಮಾಡುವಂತೆ ಆಗಲಿ ಎಂದರು. 

ನಟ ಸಿಹಿಕಹಿ ಚಂದ್ರು ಅವರು ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಪ್ರಾರಂಭ ಮಾಡಿರುವುದರ ಹಿಂದೇ ಸಾಕಷ್ಟು ಶ್ರಮ ಇದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡಿರುವ ಇಂಡಿಯಾ ಸ್ವೀಟ್ ಹೌಸ್ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೆ. ಈ ಸಂಸ್ಥೆಯಲ್ಲಿ ದುಡಿಯುವ ಎಲ್ಲ ವರ್ಗ ನಮ್ಮದೇ ಸಹಿ ಸಂಸ್ಥೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. 

ವಿಶ್ವನಾಥ್ ಮೂರ್ತಿ ಅವರು ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಭಾರತೀಯ ಸಿಹಿ ತಿಂಡಿಗಳ ವೈವಿಧ್ಯಮಯ ಶ್ರೇಣಿ ಹೊಂದಿದೆ. ಗ್ರಾಹಕರು ಅಭಿರುಚಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸಲಾಗಿದೆ. ಮೈಸೂರು ಪಾಕ್ ಜತೆಗೆ ಬೆಂಗಾಲಿ ಸಿಹಿ ತಿಂಡಿಗಳಾದ ಕ್ಷೀರ್ ಮೋಹನ್ ಮತ್ತು ರಸ್ಮಂಜೂರಿ ಕೂಡ ಸವಿಯಬಹುದು.

ಉತ್ತರ ಭಾರತದ ನೆಚ್ಚಿನ ತಿಂಡಿಗಳಾದ ಗುಲಾಬ್ ಜಾಮೂನ್ ಮತ್ತು ಜಲೇಬಿಯಿಂದ ಹಿಡಿದು ರಾಜಸ್ಥಾನದ ಡ್ರೈಫ್ರೂಟ್ ಪೇಡಾಗಳವರೆಗೆ ಇಂಡಿಯಾ ಸ್ವೀಟ್ ಹೌಸ್ ಎಲ್ಲ ತರಹದ  ಸಿಹಿ ತಿಂಡಿಗಳನ್ನು ಗ್ರಾಹಕರಿಗೆ ನೀಡುವ ಕೆಲಸ ಮಾಡಿದೆ. ಇನ್ನು ಘಮಘಮಿಸುವ ಲೈವ್ ಚಾಟ್ ಕೌಂಟರ್ ಅನ್ನು ಒಳಗೊಂಡಿದೆ. ಸ್ಟಫ್ಡ್ ಚಿಲ್ಲಿ ಬಜ್ಜಿ, ಆಲೂ ಮತ್ತು ಈರುಳ್ಳಿ ಸಮೋಸಾ ಮತ್ತು ತುಪ್ಪದ ಜಲೇಬಿ ಸೇರಿದಂತೆ ಹಲವಾರು ತಿಂಡಿಗಳು ಲಭ್ಯ ಇವೆ ಎಂದರು.

ಇಂಡಿಯಾ ಸ್ವೀಟ್ ಹೌಸ್ ಮಳಿಗೆಯಲ್ಲಿ 300 ಕ್ಕೂ ಹೆಚ್ಚು ಬಗೆ ಸಿಹಿ ತಿಂಡಿಗಳು, ಖಾರಗಳು ಮತ್ತು ಚಾಟ್‌ ಉತ್ಪನ್ನಗಳ ಶ್ರೇಣಿ ಲಭ್ಯವಿದೆ. ಈ ಮಳಿಗೆಯಲ್ಲಿ ಗ್ರಾಹಕರಿಗೆ ಆರಾಮದಾಯಕವಾಗಿ ಕುಳಿತು ಸಿಹಿ ತಿಂಡಿ ಸವಿಯಲು ವಿಶಾಲ ಜಾಗವಿದ್ದು, ಆಸನ ವ್ಯವಸ್ಥೆ ಮಾಡಲಾಗಿದೆ. ಸ್ನೇಹಿತರು ಮತ್ತು ಕುಟುಂಬದ ಜತೆ ತಮ್ಮ ಇಷ್ಟದ, ರುಚಿಕರ ಸಿಹಿ ತಿಂಡಿಗಳನ್ನು ಸೇವನೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಸ್ವೀಟ್ ಹೌಸ್‌ನ ಸಹ-ಸಂಸ್ಥಾಪಕ ಶ್ವೇತಾ ರಾಜಶೇಖರ್ ಸೇರಿದಂತೆ ಹಲವರು ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಸೇವ್‌ ಮೈಸೂರು ಸಿಲ್ಕ್‌ ಎಂಬ ಜನಾಂದೋಲನ ಮಾಡುತ್ತೇವೆ: ಆರ್‌.ಅಶೋಕ

ಸೇವ್‌ ಮೈಸೂರು ಸಿಲ್ಕ್‌ ಎಂಬ ಜನಾಂದೋಲನ ಮಾಡುತ್ತೇವೆ: ಆರ್‌.ಅಶೋಕ

ಈ ಯೋಜನೆ ಕೈ ಬಿಡದೇ ಇದ್ದರೆ ಬಿಜೆಪಿಯಿಂದ ʼಸೇವ್‌ ಮೈಸೂರು ಸಿಲ್ಕ್‌ʼ ಎಂಬ ಹೆಸರಿನ ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R. Ashoka) ಎಚ್ಚರಿಕೆ ನೀಡಿದರು.

[ccc_my_favorite_select_button post_id="119800"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹ ಶಂಕೆ.. ಆತ್ಮಹತ್ಯೆ

ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹ ಶಂಕೆ.. ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತಂದೆಯ ಮನೆಯಲ್ಲಿ ಆತ್ಮಹತ್ಯೆಗೆ ( Suicide) ಶರಣಾಗಿರುವ ಘಟನೆ ತಾಲೂಕಿನ *** ನಡೆದಿದೆ.

[ccc_my_favorite_select_button post_id="119787"]
ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಪೆಟ್ರೋಲ್ ಬಂಕ್ ಮುಂಭಾಗ ಸಂಭವಿಸಿದೆ.

[ccc_my_favorite_select_button post_id="119695"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!