ವಯನಾಡು (ಆಗಸ್ಟ್.10); ತೀವ್ರ ಮಳೆಯಿಂದ ಉಂಟಾದ ಭೀಕರ ಭೂಕುಸಿತದಿಂದ ನೂರಾರು ಜನರ ಸಾವಿಗೆ ಸಾಕ್ಷಿಯಾದ ಕೇರಳದ ವಯಾನಾಡುಗೆ 15 ದಿನಗಳ ನಂತರ ಪ್ರಧಾನಿ ನರೇಂದ್ರ ಭೇಟಿ ನೀಡಿದ್ದು, ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ತೀವ್ರ ಭೂಕುಸಿತದಿಂದ ಸಾವು, ನೋವುಗಳಾಗಿ ನೂರಾರು ಮಂದಿ ಮನೆ ಮಠ ಕಳೆದುಕೊಂಡಿದ್ದರು, ಪ್ರಧಾನಿ ಮೋದಿ ಅವರು ವಯನಾಡುಗೆ ಭೇಟಿ ನೀಡದೆ ಇದ್ದದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಇಂದು ಭೂಕುಸಿತದಿಂದ ತೀವ್ರವಾಗಿ ಹಾನಿಯಾಗಿರುವ ವಯನಾಡಿನ ಪುಂಚಿರಿಮಟ್ಟಂ, ಚೂರ್ಮಲಾ ಹಾಗೂ ಮುಂಡಕ್ಕೆ ಪ್ರದೇಶಗಳಿಗೆ ಮೋದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದೇ ವೇಳೆ ಎಷ್ಟು ಮಕ್ಕಳು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಕೇಳಿದ್ದಾರೆ.
ಇದೇ ವೇಳೆ ದುರಂತ ಸ್ಥಳದಲ್ಲಿನ ಪರಿಹಾರ ಕಾರ್ಯಗಳ ಕುರಿತು ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮೋದಿ ದುರಂತದಲ್ಲಿ ಬದುಕುಳಿದವರ ಜೊತೆ ಮಾತನಾಡಿದ್ದಾರೆ.
ದುರಂತದಿಂದ ಆಪ್ತರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಭೇಟಿಯಾದ ಮೋದಿ, ಅವರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಬದುಕು ಕಟ್ಟಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ನಂತರ ಮಾತನಾಡಿದ ಅವರು, ಸಾವಿರಾರು ಪರಿವಾರದ ಕನಸು ನುಚ್ಚುನೂರಾಗಿದೆ. ಪ್ರಕೃತಿ ರೌದ್ರ ರೂಪ ತೋರಿಸಿದೆ. ನಾನು ಆ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಜೊತೆಗೆ ಸಂತ್ರಸ್ತರ ಕೇಂದ್ರಗಳಿಗೂ ಭೇಟಿ ನೀಡಿ ಸಂತ್ರಸ್ತರಿಂದ ಎಲ್ಲಾ ವಿವರಗಳನ್ನು ಕೇಳಿದ್ದೇನೆ. ಆಸ್ಪತ್ರೆಯಲ್ಲೂ ಗಾಯಾಳುಗಳು ಕಷ್ಟದ ಪರಿಸ್ಥಿತಿಯನ್ನು ನೋಡಿದ್ದೇನೆ.
ನಮಗೆ ದುರ್ಘಟನೆಯಲ್ಲಿ ಮಡಿದ ಜನರನ್ನು ವಾಪಸ್ ತರಲು ಸಾಧ್ಯವಿಲ್ಲ. ಆದರೆ ಅಲ್ಲಿನ ಸಂತ್ರಸ್ತರಿಗೆ ಭವಿಷ್ಯಕ್ಕೆ ಸಹಾಯವನ್ನು ಮಾಡುತ್ತೇವೆ. ದೇಶ ಹಾಗೂ ಕೇಂದ್ರ ಸರ್ಕಾರ ಇಲ್ಲಿನ ಜನರ ಜೊತೆ ಇದ್ದೇವೆ. ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರ ಜೊತೆ ನಮ್ಮ ಪ್ರಾರ್ಥನೆ ಇದೆ.
ಪರಿಹಾರ ಕಾರ್ಯಗಳಲ್ಲಿ ಸಹಾಯ ಮಾಡಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ಕೇಂದ್ರವು ಭರವಸೆ ನೀಡುತ್ತದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….