ಮಂಡ್ಯ, (ಆಗಸ್ಟ್.11); ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಜಮೀನು ಒಂದರಲ್ಲಿ ವಿದ್ಯುತ್ ತಂತಿ ತಗುಲಿ (Short circuit) ಚಿರತೆಯೊಂದು ಮೃತಪಟ್ಟಿದೆ.
ರಾಘು ದೇವಸೇಗೌಡ್ರು ಎಂಬುವವರಿಗೆ ಸೇರಿದ ಜಮೀನಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಚಿರತೆಯೂ ಮರ ಹತ್ತುವ ವೇಳೆಯಲ್ಲಿ ಮೋಟಾರ್ ಲೈನ್ ತಂತಿ ತಗಲಿ (Short circuit) ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ವಿಷಯ ತಿಳಿದ ನಂತರ ಅಕ್ಕಪಕ್ಕ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತದನಂತರ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಪರಿಶೀಲಿನೆ ನಡೆಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….