ಬೆಂಗಳೂರು, (ಆಗಸ್ಟ್.14): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲಿಸಬೇಕು ಎಂದು ಈಶ ಪ್ರತಿಷ್ಠಾನದ ಸದ್ಗುರು ಮನವಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹೇಯ ದೌರ್ಜನ್ಯಗಳನ್ನು ತಕ್ಷಣವೇ ನಿಲ್ಲಿಸುವುದು ಅತಿಮುಖ್ಯ. ಆದರೆ ಈ ದೌರ್ಜನ್ಯಗಳನ್ನು ಸಾಧ್ಯವಾದಷ್ಟು ವಿವರವಾಗಿ ದಾಖಲಿಸುವುದು ಅಷ್ಟೇ ಮುಖ್ಯ. ದೇಶದ ಗಡಿಗಳು ಸಂಪೂರ್ಣವಲ್ಲ. ಆದರೆ ಸಾಂಸ್ಕೃತಿಕ ಸಂಬಂಧಗಳು ಮತ್ತು ನಾಗರಿಕತೆಯ ಸಂಪರ್ಕವು ಹೆಚ್ಚು ಮುಖ್ಯ.
ಭಾರತವು ಕೇವಲ ಗಡಿ ತರ್ಕದಿಂದ ಬಂಧಿತವಾಗಬಾರದು. ಆದರೆ 75 ವರ್ಷಗಳಿಗಿಂತ ಹಳೆಯದಾದ ನಾಗರಿಕತೆಯ ವಿಶಾಲ ವಾಸ್ತವಗಳಿಂದ ಬಂಧಿಸಲ್ಪಡಬೇಕು’ ಎಂದು ಎಕ್ಸ್ ಖಾತೆಯಲ್ಲಿ ಟ್ವಿಟ್ ಮೂಲಕ ಮಂಗಳವಾರ ಮನವಿ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….