ಬೆಂಗಳೂರು, (ಆಗಸ್ಟ್.14): ಲಕ್ನೋ ಮೂಲದ ಟೆಕ್ಕಿ ನಾಪತ್ತೆಯಾಗಿರುವ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಇದೀಗ ಆತನ ಪತ್ನಿ ತನಗೆ ಪತಿಯ ಜೀವ ಉಳಿಯಬೇಕಾದರೆ ಹಣ ನೀಡಬೇಕು ಎಂಬ ಬೆದರಿಕೆ ಸಂದೇಶ ಬಂದಿರುವುದಾಗಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಲಕ್ಕೋ ಮೂಲಕ ವಿಪಿನ್ ಗುಪ್ತಾ (37 ವರ್ಷ) ಆಗಸ್ಟ್ 4 ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪತ್ನಿ ಶ್ರೀಪರ್ಣಾ ದತ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಶ್ರೀಪರ್ಣಾ ತಮ್ಮ ಪತಿಯನ್ನು ಹುಡುಕಿ ಕೊಡುವಂತೆ ಸಾರ್ವಜನಿಕರ ಸಹಾಯ ಕೋರಿದ್ದಾರೆ. ಮಾತ್ರವಲ್ಲದೇ ತಮಗೆ ಹಣ ಕೇಳುವ ಸಂದೇಶಗಳು ಬರುತ್ತಿದ್ದು ಕೊಡದೇ ಹೋದರೆ ಪತಿಯನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ಶ್ರೀಪರ್ಣಾ, ವಿಪಿನ್ ಕಣ್ಮರೆಯಾದ ಕೇವಲ 25 ನಿಮಿಷಗಳ ನಂತರ ಅವರ ಖಾತೆಯಿಂದ 1.8 ಲಕ್ಷ ರೂ. ತೆಗೆಯಲಾಗಿದೆ. ನಾಪತ್ತೆಯಾದ ದಿನ ಮಧ್ಯಾಹ್ನ 2 ಗಂಟೆಯಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ವಿಪಿನ್ ಯಾವುದೇ ರೀತಿಯ ಖಿನ್ನತೆಯಿಂದ ಬಳಲುತ್ತಿರಲಿಲ್ಲ ಹಾಗೂ ಯಾವುದೇ ವ್ಯಸನವನ್ನು ಹೊಂದಿರಲಿಲ್ಲ. ನಾವು ಹತಾಶರಾಗಿದ್ದೇವೆ, ನಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಆಗಸ್ಟ್ 4 ರಂದು ಮನೆಯಲ್ಲಿ ಪತ್ನಿಯ ಬಳಿ ಏನನ್ನೂ ಹೇಳದೆ ಶರ್ಟ್ ಧರಿಸಿ ಏಕಾಏಕಿ ಬೈಕ್‌ನಲ್ಲಿ ಹೊರಗಡೆ ಹೋಗಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲಾಗಿದ್ದು, ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ.
ಈ ಕುರಿತು ಅವರ ಪತ್ನಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ವಿಪಿನ್ ಅವರ ಬೈಕ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪತ್ತೆಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….