ಎಲ್ಲೆಲ್ಲಿ ಒಳ್ಳೆಯವರು ಹೋಗುತ್ತಾರೋ ಅಲ್ಲೆಲ್ಲ ಊರು ಉದ್ದಾರವಾಗುತ್ತದೆ.
ಒಂದು ಸಾರಿ ಗುರು ನಾನಕ್ ಒಂದು ಕಾಡಿನಲ್ಲಿ ಶಿಷ್ಯರ ಜೊತೆ ಭಗವಂತನ ಸ್ಮರಣೆ ಮಾಡುತ್ತಿದ್ದರು. ಕಾಡಿನ ಸಮೀಪ ಒಂದು ಹಳ್ಳಿ. ಆ ಹಳ್ಳಿಯ ಜನರು ಬಂದು ಗುರು ನಾನಕ ಗುರುಗಳನ್ನು ತಮ್ಮ ಹಳ್ಳಿಗೆ ಬರುವಂತೆ ವಿನಂತಿಸಿಕೊಂಡರು.
ಗುರು ನಾನಕ್, ಶಿಷ್ಯರು ಜೊತೆಯಲ್ಲಿ ಆ ಹಳ್ಳಿಗೆ ಹೋದರು. ಆ ಹಳ್ಳಿಯ ಜನರು ಆ ಗುರುಗಳಿಗೆ ವಿಶೇಷ ಗೌರವ, ಆದರಗಳನ್ನು ತೋರಿಸಿದರು.
ಆ ಗೌರವ, ಆದರಗಳನ್ನು ಸ್ವೀಕರಿಸಿದ ಗುರು ನಾನಕ್ ಆ ಹಳ್ಳಿಯ ಜನರನ್ನು ಈ ರೀತಿ ಶಪಿಸಿದರು,” ನೀವೆಲ್ಲಾ ನನಗೆ ಬಹಳ ಗೌರವ, ಪ್ರೀತಿ ತೋರಿಸಿದ್ದೀರಿ ಅದಕ್ಕೆ ನೀವೆಲ್ಲಾ ಹಾಳಾಗಿಹೋಗಿ.”
ಹಾಗೆ ಮುಂದಿನ ಹಳ್ಳಿಗೆ ಗುರು ನಾನಕ್ ಹೋದರು ಅಲ್ಲಿ ಯಾರೂ ಅವರನ್ನು ಗೌರವಿಸಲು ಮುಂದೆ ಬರಲಿಲ್ಲ. ಅವರೆಲ್ಲರೂ ತಮ್ಮ ಪಾಡಿಗೆ ಕೆಲಸ, ಹರಟೆ ಯಲ್ಲಿ ಮಗ್ನರಾಗಿದ್ದರು.
ಗುರು ನಾನಕ್ ಅವರಿಗೆ ಇದರಿಂದ ಬಹಳ ಸಂತೋಷವಾಗಿ ಆ ಹಳ್ಳಿಯ ಜನರನ್ನು, “ನೀವೆಲ್ಲಾ ಇಲ್ಲೇ ಎಲ್ಲರೂ ಸುಖವಾಗಿರಿ” ಎಂದು ಹರಸಿ ಶಿಷ್ಯರನ್ನು ಕರೆದುಕೊಂಡು ಮುಂದಕ್ಕೆ ಹೋದರು.
ಇದನ್ನು ಒಬ್ಬ ಶಿಷ್ಯ ಗುರು ನಾನಕ್ ರನ್ನು ಕೇಳಿದ, “ಗುರುಗಳೆ, ನಿಮಗೆ ಪ್ರೀತಿ, ಗೌರವ ತೋರಿಸಿದವರನ್ನು ಹಾಳಾಗಿ ಹೋಗಿ ಎಂದು ಹೇಳಿದಿರಿ. ಈಗ ಇಲ್ಲಿ ಇವರು ಯಾರೂ ನಿಮಗೆ ಪ್ರೀತಿ, ಗೌರವ ಕೊಡಲಿಲ್ಲ ಇವರನ್ನೆಲ್ಲ ಹರಿಸಿದಿರಿ. ಇದರ ಅರ್ಥ ಹೇಳಿ ಗುರುಗಳೇ.
ಗುರು ನಾನಕ್, “ಗೌರವ ತೋರಿಸಿದ ಆ ಹಳ್ಳಿಯ ಜನ ಒಳ್ಳೆಯವರು ಅವರು ಒಂದೇ ಕಡೆ ಇರಬಾರದು. ಅವರೆಲ್ಲ ಬೇರೆ ಕಡೆಗೆ ಹೋಗಬೇಕು. ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಊರು ಉದ್ದಾರವಾಗುತ್ತದೆ.
ಎರಡನೆಯ ಹಳ್ಳಿಯ ಜನ ಕೆಟ್ಟವರು ಅವರು ಅಲ್ಲೇ ಇರಲಿ. ಅವರು ಬೇರೆ ಕಡೆಗೆ ಹೋದರೆ ಆ ಊರನ್ನು ಹಾಳುಮಾಡುತ್ತಾರೆ. ಅದಕ್ಕೆ ಅವರು ಇದ್ದ ಊರಲ್ಲಿ ಇರಲಿ ಎಂದರು.
ಕೃಪೆ: ಸಾಮಾಜಿಕ ಜಾಲತಾಣ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….