ಮುಂಬೈ, (ಸೆ.06): ಪ್ರಧಾನಿ ಮೋದಿ ಉದ್ಘಾಟಿಸಿ ಕೇವಲ ಎಂಟು ತಿಂಗಳಲ್ಲೇ ಕುಸಿದ ಸಿಂಧುದುರ್ಗ ಜಿಲ್ಲೆಯಲ್ಲಿ ಮರಾಠಾ ರಾಜ ಛತ್ರಪತಿ ಶಿವಾಜಿ ಘಟನೆ ನಂತರ ತಲೆಮರೆಸಿಕೊಂಡಿದ್ದ ಶಿಲ್ಪಿ ಜಯದೀಪ್ ಆಪೈನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಪ್ರತಿಮೆ ಕುಸಿತ ನಂತರ ಎರಡು ವಾರಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಜಯದೀಪ್‌ನನ್ನು ಕಲ್ಯಾಣ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ.
ಈತನನ್ನು ಪತ್ತೆ ಹಚ್ಚಲು ಪೊಲೀಸರು 7 ತಂಡಗಳನ್ನು ರಚಿಸಿದ್ದರು. ಡಿಸಿಪಿ ಸಚಿನ್ ಗುಂಜಾಲ್ ನೇತೃತ್ವದ ತಂಡ ಜಯದೀಪ್ ನನ್ನು ಬಂಧಿಸಿದೆ. ನಂತರ ಆತನನ್ನು ಸಿಂಧುದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….